ಈಗಿನ ಸುದ್ದಿ

ಕೇಜ್ರಿವಾಲ್ ಜತೆ ಡಿನ್ನರ್ ಗೆ 20 ಸಾವಿರ ರುಪಾಯಿ ಶುಲ್ಕ!

ಕೇಜ್ರಿವಾಲ್ ಜತೆ ಡಿನ್ನರ್ ಗೆ 20 ಸಾವಿರ ರುಪಾಯಿ ಶುಲ್ಕ!
Published On :

ಬೆಂಗಳೂರು: ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಊಟ ಮಾಡುವ ಭಾಗ್ಯ ಬೆಂಗಳೂರಿಗರಿಗೆ ಸಿಕ್ಕಿದೆ. ಆದರೆ ಅದಕ್ಕಾಗಿ ನೀವು 20 ಸಾವಿರ ರುಪಾಯಿ ಖರ್ಚು ಮಾಡಬೇಕು ಅಷ್ಟೆ.

ಅರವಿಂದ್ ಕೇಜ್ರಿವಾಲ್ ಅವರು ಇದೇ ಮಾರ್ಚ್ 15ರಂದು ನಗರಕ್ಕೆ ಆಗಮಿಸುತ್ತಿದ್ದು, ಈ ವೇಳೆ ಆಪ್ ನಾಯಕರು ಪಕ್ಷದ ನಿಧಿ ಸಂಗ್ರಹಣೆಗೆ ಭೋಜನಕೂಟ ಏರ್ಪಡಿಸಿದ್ದಾರೆ. ನೀವು 20 ಸಾವಿರ ರುಪಾಯಿ ಕೊಟ್ಟರೆ, ಕೇಜ್ರಿವಾಲ್ ಜತೆ ಊಟದೊಂದಿಗೆ ಸಂದರ್ಶನ ಮಾಡಬಹುದು. ಇತ್ತಿಚೀಗಷ್ಟೆ ಎಎಪಿ ಸದಸ್ಯರಾಗಿರುವ ಐಟಿ ಉದ್ಯಮಿ ವಿ.ಬಾಲಕೃಷ್ಣನ್ ಅವರು ಈ ಡಿನ್ನರ್ ಪಾರ್ಟಿ ಆಯೋಜಿಸಿದ್ದು, ಸುಮಾರು 200 ಮಂದಿಗೆ ಆಹ್ವಾನ ನೀಡಲಾಗಿದೆ. ಭಾಗವಹಿಸುವ 200 ಮಂದಿಯಿಂದ 40 ಲಕ್ಷ ರುಪಾಯಿ ಸಂಗ್ರಹಿಸುವ ಗುರಿ ಹೊಂದಲಾಗಿದೆ.

ಕೇಜ್ರಿವಾಲ್ ಅವರೊಂದಿಗೆ ಖಾಸಗಿ ಹೋಟೆಲ್ವೊಂದರಲ್ಲಿ ನಡೆಯುವ ಸಂವಾದಕ್ಕೆ ಉದ್ಯಮಿಗಳನ್ನು ವಿಶೇಷವಾಗಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಭಾಗವಹಿಸುವ ಪ್ರತಿ ವ್ಯಕ್ತಿ 20 ಸಾವಿರ ರುಪಾಯಿ ಶುಲ್ಕ ಭರಿಸಬೇಕಾಗಿದೆ.

ಅರವಿಂದ್ ಕೇಜ್ರಿವಾಲ್ ಹಾಗೂ ಇತರೆ ಸ್ಥಳೀಯ ಎಎಪಿ ನಾಯಕರೊಂದಿಗೆ ಚರ್ಚಿಸುವ ಅವಕಾಶ ನಿಮಗೆ ಸಿಕ್ಕಿದೆ. ಅನಧಿಕೃತ ಮೂಲಗಳಿಂದ ನಿಧಿ ಸಂಗ್ರಹಿಸುವ ಮೂಲಕ ರಾಜಕೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ತೊಡಗಿವೆ. ಆದರೆ ಎಎಪಿ ಇದನ್ನು ಬದಲಿಸುವ ಉದ್ದೇಶದಿಂದ ಅಧಿಕೃತ ಮೂಲಗಳಿಂದಲೇ ನಿಧಿ ಸಂಗ್ರಹಿಸುತ್ತಿದೆ ಮತ್ತು ಇದು ಸಂಪೂರ್ಣ ಪಾರದರ್ಶಕವಾಗಿರುತ್ತದೆ ಎಂದು ಬಾಲಕೃಷ್ಣನ್ ಅವರು 'ಕೇಜ್ರಿವಾಲ್ ಫಂಡ್ ರೈಸಿಂಗ್ ಡಿನ್ನರ್' ಅನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಈ ರೀತಿ ಸಂಗ್ರಹಿಸುವ ಹಣವನ್ನು ಅಭ್ಯರ್ಥಿಗಳ ಚುನಾವಣಾ ಖರ್ಚಿಗಾಗಿ ಬಳಸಿಕೊಳ್ಳಲಾಗುವುದು. ಹೀಗಾಗಿ ತಾವುಗಳು ಈ ಡಿನ್ನರ್ ಪಾರ್ಟಿಗೆ ಹಾಜರಾಗುವಂತೆ ಮೇಲ್ ಮೂಲಕ ಬಾಲಕೃಷ್ಣನ್ ಅವರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.