ಕೇಜ್ರಿವಾಲ್ ಸಿಐಎ ಏಜೆಂಟ್: ಅಶ್ವಿನ್ ಉಪಾಧ್ಯಯ್

ನವದೆಹಲಿ: 2014ರ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ್ದಕ್ಕಾಗಿ ಆಮ್ ಆದ್ಮಿ ಪಕ್ಷದ ಕಾನೂನು ವಿಭಾಗ ಅಧ್ಯಕ್ಷ ಅಶ್ವಿನ್ ಉಪಾಧ್ಯಯ್ ಅರವಿಂದ್ ಕೇಜ್ರಿವಾಲ್ರನ್ನು ಸುಳ್ಳುಗಾರ, ಸಿಐಎ ಏಜೆಂಟ್ ಎಂದು ಕರೆದಿದ್ದಾರೆ.
ಭಾನುವಾರ ಮಥುರಾದಲ್ಲಿ ನಡೆಯುವ ರ್ಯಾಲಿಯಲ್ಲಿ ಭಾಗವಹಿಸಲು ಹೊರಡುತ್ತಿದ್ದ ಕೇಜ್ರಿವಾಲ್ರನ್ನು ಅಡ್ಡಗಟ್ಟಿ ಅಶ್ವಿನ್ ಜಗಳವಾಡಿದ್ದಾರೆ. ಇಬ್ಬರ ಮಧ್ಯೆಯೂ ತರ್ಕವೇರ್ಪಟ್ಟಿದ್ದು, ಅಶ್ವಿನ್ ಅವರು ಈ ವ್ಯಕ್ತಿ ಸುಳ್ಳುಗಾರ, ಈತ ಸುಳ್ಳು ಹೇಳುತ್ತಿದ್ದಾನೆ ಎಂದು ಬೊಬ್ಬೆ ಹಾಕಿದ್ದಾರೆ.
ಭ್ರಷ್ಟಾಚಾರ, ಕೋಮುವಾದ, ಹೈಕಮಾಂಡ್ ಸಂಸ್ಕೃತಿ, ಜಾತಿವಾದ ಎಲ್ಲದರ ನಿವಾರಣೆ ಆಪ್ನ ಧ್ಯೇಯವಾಗಿತ್ತು. ಆದರೆ ಈಗ ಆಪ್ ಇವೆಲ್ಲದರ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂದು ಅಶ್ವಿನ್ ದೂರಿದ್ದಾರೆ.
ಆದಾಗ್ಯೂ, ಅಶ್ವಿನ್ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಕೇಜ್ರಿವಾಲ್ ಮಾಧ್ಯಮದವರ ಮುಂದೆಯೇ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅಶ್ವಿನ್ ಕೇಜ್ರಿವಾಲ್ರಿಗೆ 11 ಪ್ರಶ್ನೆಗಳನ್ನು ಕೇಳಿದ್ದಾರೆ. ಆದಾಗ್ಯೂ, ಕೇಜ್ರಿವಾಲ್ ತಮ್ಮ ಪ್ರಶ್ನೆಗಳಿಗೆ ಉತ್ತರಿಸುವವರೆಗೂ ತಾನು ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಅಶ್ವಿನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


