14 ಮಂದಿ ಕೈ ಪಟ್ಟಿ ಬಿಡುಗಡೆ
ನವದೆಹಲಿ: 2014ರ ಲೋಕಸಭಾ ಮಹಾ ಸಮರಕ್ಕೆ ಕಾಂಗ್ರೆಸ್ 194 ಹುರಿಯಾಳುಗಳನ್ನೊಳಗೊಂಡ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಕರ್ನಾಟಕದ 14 ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಕ್ರಿಕೆಟಿಗ ಮಹಮ್ಮದ್ ಕೈಫ್, ಡಿಸ್ಕಸ್ ಥ್ರೋ ಆಟಗಾರ್ತಿ ಕೃಷ್ಣ ಪೂರ್ನಿಯಾ, ನಂದನ್ ನಿಲೇಕಣಿ, ವಾಜಪೇಯಿ ಅವರ ಸೊಸೆ ಕರುಣಾ ಶರ್ಮಾ ಸೇರಿದಂತೆ 194 ಮಂದಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇವರಲ್ಲದೇ ಶ್ರೀಪ್ರಕಾಶ್ ಜೈಸ್ವಾಲ್, ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ನಟಿ ರಮ್ಯಾ, ಜ್ಯೋತಿರಾಧಿತ್ಯ ಸಿಂಧಿಯಾ, ಜೀತೇಂದ್ರ ಸಿಂಗ್ ಸೇರಿದಂತೆ ಇನ್ನೂ ಹಲವರು ಇದ್ದಾರೆ.
ಕರ್ನಾಟಕದ ಪಟ್ಟಿ
- ಬಿಜಾಪುರ (ಎಸ್ಸಿ) - ಪ್ರಕಾಶ್ ರಾಥೋಡ್
- ಗುಲ್ಬರ್ಗ (ಎಸ್ಸಿ )- ಮಲ್ಲಿಕಾರ್ಜುನ ಖರ್ಗೆ
- ಬೀದರ್ - ಧರ್ಮಸಿಂಗ್
- ಬಳ್ಳಾರಿ (ಎಸ್ಟಿ) - ನ್ಯಾ. ಎನ್.ವೈ. ಹನುಮಂತಪ್ಪ
- ದಾವಣಗೆರೆ - ಎಸ್.ಎಸ್. ಮಲ್ಲಿಕಾರ್ಜುನ
- ಉಡುಪಿ - ಚಿಕ್ಕಮಗಳೂರು - ಜಯಪ್ರಕಾಶ್ ಹೆಗ್ಡೆ
- ಹಾಸನ - ಎ. ಮಂಜು
- ತುಮಕೂರು - ಎಸ್. ಪಿ. ಮುದ್ದೇಹನುಮಗೌಡ
- ಮಂಡ್ಯ - ರಮ್ಯಾ
- ಮೈಸೂರು - ಎಚ್. ವಿಶ್ವನಾಥ್
- ಚಾಮರಾಜನಗರ (ಎಸ್ಸಿ) - ಆರ್. ಧ್ರುವನಾರಾಯಣ
- ಬೆಂಗಳೂರು ಗ್ರಾಂ.- ಡಿ.ಕೆ. ಸುರೇಶ್
- ಬೆಂಗಳೂರು ದಕ್ಷಿಣ - ನಂದನ್ ನಿಲೇಕಣಿ
- ಕೋಲಾರ (ಎಸ್ಸಿ) - ಕೆ.ಎಚ್. ಮುನಿಯಪ್ಪ
ಇತರೆ ಪ್ರಮುಖರು
- ರಾಯ್ಬರೇಲಿ - ಸೋನಿಯಾ ಗಾಂಧಿ
- ಅಮೇಥಿ - ರಾಹುಲ್ ಗಾಂಧಿ
- ರೋಹ್ಟಕ್ - ದೀಪೆಂದರ್ ಸಿಂಗ್ ಹೂಡಾ
- ಸಾಸಾರಾಂ - ಮೀರಾಕುಮಾರ್
- ಸೋಲಾಪುರ ಎಸ್ಸಿ - ಸುಶೀಲ್ ಕುಮಾರ್ ಶಿಂಧೆ
- ಗುನಾ - ಜ್ಯೋತಿರಾಧಿತ್ಯ ಸಿಂಧಿಯಾ
- ಬಾರಾಬಂಕಿ ಎಸ್ಸಿ - ಕೃಷ್ಣಾ ಪೂನಿಯಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

