ಈಗಿನ ಸುದ್ದಿ

ಡಿಕೆಶಿ ವಿರುದ್ಧ ಸ್ಟಿಂಗ್: ನ್ಯಾಯಾಂಗ ಬಂಧನಕ್ಕೆ ಪತ್ರಕರ್ತರು

ಡಿಕೆಶಿ ವಿರುದ್ಧ ಸ್ಟಿಂಗ್: ನ್ಯಾಯಾಂಗ ಬಂಧನಕ್ಕೆ ಪತ್ರಕರ್ತರು
Published On :

ಬೆಂಗಳೂರು: ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಕುಟುಕು ಕಾರ್ಯಾಚರಣೆ ಮಾಡಲು ಹೋಗಿ ಬಂಧನಕ್ಕೊಳಗಾಗಿದ್ದ ಖಾಸಗಿ ಸುದ್ದಿವಾಹಿನಿಯ ಇಬ್ಬರು ವರದಿಗಾರರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಚಿವರಿಗೆ ಲಂಚ ನೀಡಲು ಯತ್ನಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ವರದಿಗಾರರನ್ನು ಇಂದು ಮಧ್ಯಾಹ್ನ ಸದಾಶಿವನಗರ ಪೊಲೀಸರು, ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗಳನ್ನು ಮಾರ್ಚ್ 13ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಈ ಮಧ್ಯೆ, ಬಂಧಿತ ಪತ್ರಕರ್ತರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ನಾಳೆ ಕೈಗೆತ್ತಿಕೊಳ್ಳಲಿದೆ.

ಶಿವಕುಮಾರ್ ಅವರ ವಿರುದ್ಧ ಕುಟುಕು ಕಾರ್ಯಾಚರಣೆಗೆ ತೆರಳಿದ್ದ ಖಾಸಗಿ ಸುದ್ದಿ ವಾಹಿನಿಯ ಇಬ್ಬರು ವರದಿಗಾರರನ್ನು ನಿನ್ನೆ ರಾತ್ರಿ ಪೊಲೀಸ್ ವಶಕ್ಕೆ ತೆಗೆದುಕೊಳ್ಳಗಿತ್ತು. ಅಲ್ಲದೆ ಈ ಸಂಬಂಧ ಇಬ್ಬರು ವರದಿಗಾರರು ಸೇರಿದಂತೆ ಸುದ್ದಿ ವಾಹಿನಿಯ ಮುಖ್ಯಸ್ಥರ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಸಚಿವರಿಗೆ ಲಂಚದ ಆಮಿಷವೊಡ್ಡಿದ ಆರೋಪದ ಮೇಲೆ ಖಾಸಗಿ ಸುದ್ದಿವಾಹಿನಿಯ ವರದಿಗಾರರಾದ ಶ್ರೇಯಸ್ ಮತ್ತು ಶ್ವೇತಾ ಎಂಬುವವರನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಬಂಧಿತರಿಂದ ಕುಟುಕು ಕಾರ್ಯಾಚರಣೆಗೆ ಬಳಸಲಾದ ಕ್ಯಾಮೆರಾ, ಆರು ಲಕ್ಷ ರುಪಾಯಿ ನಗದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಸಚಿವರ ಸೂಚನೆಯಂತೆ ವರದಿಗಾರರನ್ನು ವಶಕ್ಕೆ ತೆಗೆದುಕೊಂಡಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಇಬ್ಬರು ವರದಿಗಾರರ ಹಾಗೂ ಆ ಸುದ್ದಿವಾಹಿನಿಯ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸದಾಶಿವನಗರ ಪೊಲೀಸರು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಈ ವರದಿಗಾರರು ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್‌ ಅವರ ಮನೆಗೆ ಬರುತ್ತಿದ್ದರು. ಆದರೆ, ಸಚಿವರ ಭೇಟಿ ಸಾಧ್ಯವಾಗಿರಲಿಲ್ಲ. ಸೋಮವಾರ ಸಂಜೆ ಮನೆಗೆ ಬಂದಿರುವ ಆರೋಪಿಗಳು ಸಚಿವರನ್ನು ಭೇಟಿಯಾಗಿ, ಎನರ್ಗೊ  ಪವರ್‌ ಕಂಪೆನಿಯ ಪರವಾಗಿ ಯೋಜನೆಗಳನ್ನು ಮಂಜೂರು ಮಾಡಬೇಕೆಂದು ಲಂಚದ ಆಮಿಷವೊಡ್ಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಖಾಸಗಿ ವಾಹಿನಿಯಿಂದ ನನ್ನ ವಿರುದ್ಧ ಸಂಚು: ಡಿಕೆಶಿ
ಪ್ರಕರಣದ ನಂತರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ್, ಖಾಸಗಿ ಸುದ್ದಿವಾಹಿನಿಯೊಂದು ನನ್ನ ವಿರುದ್ಧ ಸಂಚು ನಡೆಸುತ್ತಿದೆ ಎಂದು ಆರೋಪಿಸಿದರು.
ಈ ಹಿಂದೆ ಸುದ್ದಿವಾಹಿನಿಯ ಪ್ರತಿನಿಧಿಗಳು ಎನರ್ಗೊ ಪವರ್‌ ಕಂಪೆನಿ ನೌಕರರ ಸೋಗಿನಲ್ಲಿ ಬಂದು ಕಡತವೊಂದಕ್ಕೆ ಒಪ್ಪಿಗೆ ನೀಡುವಂತೆ ಕೋರಿದ್ದರು. ಆ ಕಂಪೆನಿ ಹಾಗೂ ಕಡತದ ಬಗ್ಗೆ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿ, ಮಾಹಿತಿ ಪಡೆದೆ. ನಂತರ ಆ ಹೆಸರಿನ ಕಂಪೆನಿಯ ಯಾವುದೇ ಕಡತ ಇಲಾಖೆಗೆ ಬಂದಿಲ್ಲ ಎಂಬುದು ಗೊತ್ತಾಯಿತು. ಇದರಿಂದ ಅವರ ಮೇಲೆ ಅನುಮಾನ ಮೂಡಿತು’ ಎಂದು ತಿಳಿಸಿದರು.

‘ಬೆಳಿಗ್ಗೆ 9 ಗಂಟೆಗೆ ಮನೆಗೆ ಬಂದಿದ್ದ ಆ ಇಬ್ಬರು, ಮತ್ತೆ ಮಧ್ಯಾಹ್ನ 3.30ಕ್ಕೆ ನನ್ನ ಭೇಟಿಗೆ ಬಂದರು. ಮೊದಲೇ ಅವರ ಬಗ್ಗೆ ಅನುಮಾನವಿದ್ದುದರಿಂದ ಮಫ್ತಿಯಲ್ಲಿ ಹಾಜರಿರುವಂತೆ ಪೊಲೀಸರಿಗೆ ತಿಳಿಸಿದ್ದೆ. ಅವರು ಹಣ ನೀಡಲು ಮುಂದಾದಾಗ ಪೊಲೀಸರನ್ನು ಕರೆಸಿ, ಅವರ ವಶಕ್ಕೆ ಒಪ್ಪಿಸಿದೆ. ಅದಕ್ಕೂ ಮುನ್ನ ಸುದ್ದಿವಾಹಿನಿಯ ವರದಿಗಾರನಿಂದ ನನಗೆ ಬೆದರಿಕೆ ಕರೆಯೂ ಬಂದಿತ್ತು’ ಎಂದು ಹೇಳಿದರು.

ಪ್ರತಿ ದೂರು
ಸಚಿವ ಡಿ.ಕೆ.ಶಿವಕುಮಾರ್ ಪ್ರಚೋದನೆ ಮೇರೆಗೆ ಅವರ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಂಧನಕ್ಕೊಳಗಾಗಿರುವ ಖಾಸಗಿ ಸುದ್ದಿವಾಹಿನಿಯ ಇಬ್ಬರು ವರದಿಗಾರರು ಸಚಿವರ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.