ಈಗಿನ ಸುದ್ದಿ

ನ್ಯೂರ್ಯಾರ್ಕ್ ನಲ್ಲಿ ಸ್ಫೋಟ: 2 ಬೃಹತ್ ಕಟ್ಟಡಗಳ ಕುಸಿತ

ನ್ಯೂರ್ಯಾರ್ಕ್ ನಲ್ಲಿ ಸ್ಫೋಟ: 2 ಬೃಹತ್ ಕಟ್ಟಡಗಳ ಕುಸಿತ
Published On :

ನ್ಯೂಯಾರ್ಕ್: ನ್ಯೂಯಾರ್ಕ್ ನ ಮ್ಯಾನ್‌ಹಟನ್ ನಲ್ಲಿ ಭಾರಿ ಸ್ಪೋಟ ಉಂಟಾಗಿದ್ದು, ಸ್ಫೋಟದ ತೀವ್ರತೆಗೆ 2 ಬೃಹತ್ ಜನವಸತಿ ಕಟ್ಟಡಗಳು ನೆಲಕ್ಕುರುಳಿವೆ.

ಮ್ಯಾನ್‌ಹಟನ್‌ನ ಪಾರ್ಕ್ ಅವೆನ್ಯೂ ರಸ್ತೆ ಮತ್ತು 116ನೇ ವೀದಿಯಲ್ಲಿರುವ 2 ಬೃಹತ್ ಜನವಸತಿ ಸಮುಚ್ಛಯಗಳು ಧರೆಗುರುಳಿದ್ದು, ಸ್ಥಳೀಯ ಇಬ್ಬರು ನಿವಾಸಿಗಳು ಸಾವಿಗೀಡಾಗಿದ್ದಾರೆ. 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಟ್ಟಡ ಕುಸಿತಕ್ಕೂ ಮುನ್ನ ಕಟ್ಟಡದಲ್ಲಿ ಭಾರಿ ಸ್ಫೋಟ ಉಂಟಾಗಿದ್ದು, ಸ್ಪೋಟದ ತೀವ್ರತೆಯಿಂದಾಗಿಯೇ ಕಟ್ಟಡಗಳು ಕುಸಿತಕ್ಕೊಳಗಾದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕಟ್ಟಡದ ಸುತ್ತಮುತ್ತ ದಟ್ಟಹೊಗೆ ಸುತ್ತುವರೆದಿದ್ದು, ವಾಹನ ಸಂಚಾರ ತೀವ್ರ ಅಸ್ಥವ್ಯಸ್ಥಗೊಂಡಿದೆ. ಸ್ಫೋಟಕ್ಕೆ ನಿಗದಿತ ಕಾರಣ ತಿಳಿದುಬಂದಿಲ್ಲವಾದರೂ ಮುಂಜಾಗ್ರತಾ ಕ್ರಮವಾಗಿ ನ್ಯೂಯಾರ್ಕ್‌ನಲ್ಲಿ ಸ್ಥಳೀಯ ರೈಲು ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಸ್ಥಳೀಯ ಮೆಟ್ರೋಪಾಲಿಟನ್ ಟ್ರಾನ್ಸ್ ಪೋರ್ಟೇಷನ್ ಅಥಾರಿಟಿ ಎಲ್ಲಾ ರೀತಿ ಸ್ಥಳೀಯ ರೈಲುಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.  ಘಟನಾ ಸ್ಥಳಕ್ಕೆ 168 ಅಗ್ನಿಶಾಮಕ ದಳದ ವಾಹನಗಳು ದೌಡಾಯಿಸಿದ್ದು, 39 ವಿವಿಧ ತನಿಖಾ ವಿಭಾಗದ ಮುಖ್ಯಸ್ಥರು ತನಿಖೆ ನಡೆಸುತ್ತಿದ್ದಾರೆ.

ಇದೇ ವೇಳೆ ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬ ಕಟ್ಟಡ ಕುಸಿತಕ್ಕೂ ಮುನ್ನ ಕಟ್ಟಡದಲ್ಲಿ ಭಾರಿ ಕಂಪನವಾಗಿತ್ತು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.