ಈಗಿನ ಸುದ್ದಿ

ಗಾಂಧಿನಗರದಿಂದಲೇ ಸ್ಪರ್ಧಿಸಿ: ಅಡ್ವಾಣಿಗೆ ಬಿಜೆಪಿ ಮನವಿ

ಗಾಂಧಿನಗರದಿಂದಲೇ ಸ್ಪರ್ಧಿಸಿ: ಅಡ್ವಾಣಿಗೆ ಬಿಜೆಪಿ ಮನವಿ
Published On :

ನವದೆಹಲಿ: ತಮ್ಮ ಕ್ಷೇತ್ರವನ್ನು ಗಾಂಧಿನಗರದಿಂದ ಭೋಪಾಲ್ ಬದಲಾಯಿಸಲು ನಿರ್ಧರಿಸಿರುವ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ತಮ್ಮ ನಿಲುವು ಬದಲಿಸಬೇಕು ಎಂದು ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ತಮ್ಮ ಗಾಂಧಿನಗರ ಕ್ಷೇತ್ರದಿಂದಲೇ ಅಡ್ವಾಣಿ ಅವರು ಸ್ಪರ್ಧಿಸಬೇಕು ಎಂದು ಬಿಜೆಪಿ ಹಿರಿಯ ನಾಯಕರು ಮನವಿ ಮಾಡಿದ್ದಾರೆ. ಇಂದು ಈ ಬಗ್ಗೆ ಚರ್ಚಿಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ಎಲ್.ಕೆ.ಅಡ್ವಾಣಿ ಅವರು ಗುಜರಾತ್ ನ ಗಾಂಧಿನಗರ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಅಂತೆಯೇ ಪಕ್ಷದ ಈ ತೀರ್ಮಾನವನ್ನು ತಿಳಿಸುವಂತೆ ಸ್ವಷ್ಮಾ ಸ್ವರಾಜ್ ಅವರಿಗೆ ಹೇಳಲಾಗಿದ್ದು, ಈಗಾಗಲೇ ಸುಷ್ಮಾ ಸ್ವರಾಜ್ ಅವರು ಅಡ್ವಾಣಿ ನಿವಾಸದತ್ತ ಆಗಮಿಸುತ್ತಿದ್ದಾರೆ.

ಗಾಂಧಿನಗರ ಕ್ಷೇತ್ರದಿಂದ ಸತತ 5 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಅಡ್ವಾಣಿ ಅವರು ಇದೀಗ ದಿಢೀರ್ ತಮ್ಮ ಕ್ಷೇತ್ರವನ್ನು ಬದಲಿಸಿಕೊಳ್ಳಲು ಮುಂದಾಗಿದ್ದಾರೆ. ಈ ಹಿಂದೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದಾಗಿನಿಂದಲೂ ಅಡ್ವಾಣಿ ಮತ್ತು ಮೋದಿ ಅವರ ನಡುವೆ ಪರೋಕ್ಷ ಶೀತಲಸಮರವೇರ್ಪಟ್ಟಿತ್ತು. ಇದೇ ಕಾರಣಕ್ಕಾಗಿ ಅಡ್ವಾಣಿ ಅವರು ತಮ್ಮ ಕ್ಷೇತ್ರ ಬದಲಾವಣೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಅಡ್ವಾಣಿ ಅವರ ಇತ್ತೀಚೆಗಿನ ಭಾಷಣಗಳನ್ನು ಗಮನಿಸಿದರೆ ನರೇಂದ್ರ ಮೋದಿ ಅವರನ್ನು ಅಡ್ವಾಣಿ ಸಮರ್ಥಿಸಿಕೊಳ್ಳುತ್ತಾ ಬಂದಿದ್ದಾರೆ. ಅಂತೆಯೇ ತಮ್ಮ ಮತ್ತು ಮೋದಿ ಅವರ ನಡುವಿನ ಭಿನ್ನಾಭಿಪ್ರಾಯವನ್ನು ಕೂಡ ಅಡ್ವಾಣಿ ಅವರು ಅಲ್ಲಗಳೆದಿಲ್ಲ. ಆದರೆ ಮೋದಿ ಮತ್ತು ತಮ್ಮ ನಡುವಿನ ಭಿನ್ನಾಭಿಪ್ರಾಯಿಂದಾಗಿ ಗುಜರಾತ್ ಕಾರ್ಯಕರ್ತರು ತಮ್ಮ ಪರವಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲರೇ ಎಂಬ ಶಂಕೆ ಅಡ್ವಾಣಿ ಅವರಲ್ಲಿ ಮೂಡಿರಬಹುದು.

ಅಲ್ಲದೆ ನಾಲ್ಕು ತಿಂಗಳ ಹಿಂದೆ ನಡೆದ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶಿವರಾಜ್ ಸಿಂಗ್ ಚೌಹ್ವಾಣ್ ನೇತೃತ್ವದ ಬಿಜೆಪಿ ಪ್ರಚಂಡ ಜಯ ಸಾಧಿಸಿತ್ತು. ಶಿವರಾಜ್ ಸಿಂಗ್ ಚೌಹ್ವಾಣ್ ಅವರು ಅಡ್ವಾಣಿ ಅವರಿಗೆ ಆಪ್ತರಾಗಿದ್ದು, ಇದೂ ಕೂಡ ಅಡ್ವಾಣಿ ಅವರು ತಮ್ಮ ಕ್ಷೇತ್ರ ಬದಲಾಯಿಸಲು ಪ್ರಮುಖ ಕಾರಣವಾಗಿರಬಹದು ಎಂದು ರಾಜಕೀಯ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.