ನಟ ಅಮೀರ್ ಖಾನ್ಗೆ ಮನೆ ಮಾರುವಂತೆ ವೃದ್ಧ ಮಹಿಳೆ ಮೇಲೆ ಒತ್ತಡ

ಮುಂಬೈ: ತಮ್ಮ ಮನೆಯನ್ನು ಬಾಲಿವುಡ್ ನಟ ಅಮೀರ್ ಖಾನ್ ಅವರಿಗೆ ಮಾರಬೇಕು ಎಂದು ಸೊಸೈಟಿ ಪದಾಧಿಕಾರಿಗಳು ತಮ್ಮ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ ಎಂದು 80 ವರ್ಷದ ವೃದ್ಧ ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಈ ಕುರಿತು ಈಗಾಗಲೇ ಸೊಸೈಟಿ ಪದಾಧಿಕಾರಿಗಳ ವಿರುದ್ಧ ಬಾಂದ್ರಾ ಉಪ ರಿಜಿಸ್ಟ್ರಾರ್ ಅವರ ಬಳಿ 80 ವರ್ಷದ ಡಾ.ಪಮೇಲಾ ಅವರು ದೂರು ದಾಖಲಿಸಿದ್ದಾರೆ. ಬಾಲಿವುಡ್ ನಟ ಅಮೀರ್ ಖಾನ್ ಅವರು ಈಕೆ ವಾಸವಾಗಿರುವ ಅದೇ ಸ್ಥಳದಲ್ಲಿ 2 ಫ್ಲಾಟ್ಗಳನ್ನು ಹೊಂದಿದ್ದು, ಇದೀಗ ಬಂಗಲೆ ನಿರ್ಮಿಸಲು ಮುಂದಾಗಿದ್ದಾರೆ. ಇದಕ್ಕಾಗಿ ತಮ್ಮ ನಿವಾಸವನ್ನು ಅವರಿಗೆ ಮಾರುವಂತೆ ವಸತಿ ಸಮುಚ್ಛಯದ ಆಡಳಿತ ಮಂಡಳಿ ತಮ್ಮ ಮೇಲೆ ಒತ್ತಡ ಹೇರುತ್ತಿದೆ ಎಂದು ಪಮೇಲಾ ಅವರು ಆರೋಪಿಸಿದ್ದಾರೆ.
ಪ್ರಸ್ತುತ ಪಮೇಲಾ ಮತ್ತು ಆಕೆಯ 50 ವರ್ಷದ ಪುತ್ರಿ ಜಿನಿವೆ ಅವರು ತಮ್ಮ ಒಂದು ಫ್ಲಾಟ್ನಲ್ಲಿ ವಾಸವಾಗಿದ್ದು, ಅದೇ ಮನೆಯ ಶೇ.60 ರಷ್ಟು ಭಾಗವನ್ನು ಅಮೀರ್ ಖಾನ್ ಅವರಿಗೆ ಮಾರಬೇಕು ಎಂದು ಸೊಸೈಟಿ ಪದಾಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಮುಂಬೈನ ಪ್ರತಿಷ್ಟಿತ ಬಾಂದ್ರಾದಲ್ಲಿ ಬಂಗಲೆ ನಿರ್ಮಿಸುವ ಉದ್ದೇಶ ಹೊಂದಿದ್ದ ನಟ ಅಮೀರ್ ಖಾನ್ ಅವರು ಇದಕ್ಕಾಗಿ ವಸತಿ ಸಮುಚ್ಛಯದ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದರು.
ಅಮೀರ್ ಖಾನ್ ಅವರ ಪ್ರಸ್ತಾಪವನ್ನು ಪುರಸ್ಕರಿಸಿರುವ ಆಡಳಿತ ಮಂಡಳಿ, ಅವರಿಗೆ ಜಾಗ ನೀಡುವ ಸಲುವಾಗಿ ವಸತಿ ಸಮುಚ್ಛಯದಲ್ಲಿರುವ ಮನೆಗಳ ಪೈಕಿ ಶೇ.60 ರಷ್ಟನ್ನು ಅಮೀರ್ ಖಾನ್ ಅವರಿಗೆ ಮಾರಾಟ ಮಾಡುವಂತೆ ಮನೆ ಮಾಲೀಕರ ಮೇಲೆ ಒತ್ತಡ ಹೇರುತ್ತಿದೆ. ಒಟ್ಟು 12 ಫ್ಲಾಟ್ಗಳನ್ನು ಹೊಂದಿರುವ ಅಪಾರ್ಟ್ಮೆಂಟ್ನಲ್ಲಿ ನಟ ಅಮೀರ್ ಖಾನ್ ಅವರು ಪ್ರಸ್ತುತ 2 ಫ್ಲಾಟ್ಗಳನ್ನು ಹೊಂದಿದ್ದಾರೆ. ಒಟ್ಟು 36, 207 ಚದರ ಅಡಿ ಇರುವ ಅಪಾರ್ಟ್ ಮೆಂಟ್ನಲ್ಲಿ ಅಮೀರ್ ಖಾನ್ ಅವರು ಸುಮಾರು 20 ಸಾವಿರ ಚದರ ಅಡಿಗಳಷ್ಟು ಜಾಗವನ್ನು ಖರೀದಿಸಲು ಮುಂದಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


