ಶಕ್ತಿ ಮಿಲ್ಸ್ ಅತ್ಯಾಚಾರ ಪ್ರಕರಣ: ಐದು ಆರೋಪಿಗಳು ತಪ್ಪಿತಸ್ಥರು

ಮುಂಬೈ: ಮುಂಬೈನ ಹೊರವಲಯದಲ್ಲಿರುವ ಶಕ್ತಿಮಿಲ್ಸ್ ಸ್ಥಳದಲ್ಲಿ ನಡೆದಿದ್ದ 2 ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಬಂಧಿತ ಐವರು ಆರೋಪಿಗಳು ತಪ್ಪಿತಸ್ಥರು ಎಂದು ಮುಂಬೈ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಕಳೆದ 2013ರ ಜುಲೈ 21ರಂದು ಟೆಲಿಫೋನ್ ಆಪರೇಟರ್ ಮೇಲೆ ಮತ್ತು ಅದೇ ವರ್ಷ ಆಗಸ್ಟ್ 23ರಂದು ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ತೀರ್ಪು ಇಂದು ಹೊರಬಿದಿದ್ದು, ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಇದೇ ಶುಕ್ರವಾರ ಪ್ರಕಟಿಸಲಿದೆ. ಪ್ರಕರಣ ಇನ್ನುಳಿದ ಇಬ್ಬರು ಬಾಲಾಪರಾಧಿಗಳ ವಿಚಾರಣೆ ಪ್ರಗತಿಯಲ್ಲಿದ್ದು, ಬಾಲಾಪರಾಧ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸುತ್ತಿದೆ.
ವಿಜಯ್ ಜಾಧವ್ (19 ವರ್ಷ), ಮಹಮದ್ ಖಾಸಿಮ್ ಶೇಖ್ (21), ಮಹಮದ್ ಅನ್ಸಾರಿ (28) ಎಂಬ ಮೂವರು ಆರೋಪಿಗಳು ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಈ ಮೂವರು ಸೇರಿದಂತೆ ಮಹಮದ್ ಅಶ್ವಕ್ ಶೇಖ್ (26), ಸಲೀಂ ಅನ್ಸಾರಿ ಭಾಗಿಯಾಗಿದ್ದರು. ಇನ್ನುಳಿದ ಇಬ್ಬರು ಬಾಲಾಪರಾಧಿಗಳನ್ನು ಬಾಲಾಪರಾಧ ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದು, ಅಲ್ಲಿಯೇ ಪ್ರಕರಣದ ವಿಚಾರಣೆ ನಡೆಯಲಿದೆ.
ಕಳೆದ 2013ರ ಆಗಸ್ಟ್ 23ರಂದು ಸುದ್ದಿಗಾಗಿ ಮುಂಬೈನ ಹೊರವಲಯದಲ್ಲಿರುವ ಶಕ್ತಿ ಮಿಲ್ಸ್ಗೆ ಸಹೋದ್ಯೋಗಿಯೊಂದಿಗೆ ಬಂದಿದ್ದ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಐವರು ಆರೋಪಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಪ್ರಕರಣ ಮಾಧ್ಯಮಗಳಲ್ಲಿ ಬೆಳಕಿಗೆ ಬಂದ ನಂತರ ಅದಕ್ಕೂ ಮೊದಲು ಅಂದರೆ 2013ರ ಜುಲೈ 21ರಂದು ಅದೇ ಜಾಗದಲ್ಲಿ ಟೆಲಿಫೋನ್ ಆಪರೇಟರ್ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣ ಕೂಡ ಬೆಳಕಿಗೆ ಬಂದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


