ಈಗಿನ ಸುದ್ದಿ

ಒಂದೇ ತಿಂಗಳಲ್ಲಿ 331 ಸರ್ಜರಿ: ಭಾರತೀಯ ವೈದ್ಯನ ಲಿಮ್ಕಾ ದಾಖಲೆ

ಒಂದೇ ತಿಂಗಳಲ್ಲಿ 331 ಸರ್ಜರಿ: ಭಾರತೀಯ ವೈದ್ಯನ ಲಿಮ್ಕಾ ದಾಖಲೆ
Published On :

ಡೆಹ್ರಾಡೂನ್: ಭಾರತೀಯ ವೈದ್ಯರೊಬ್ಬರು ಒಂದೇ ತಿಂಗಳಲ್ಲಿ 331 ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಲಿಮ್ಕಾ ದಾಖಲೆಗೆ ಸೇರ್ಪಡೆಯಾಗಿದ್ದಾರೆ.

ಉತ್ತರಾಖಂಡ್‌ನ ಡೆಹ್ರಾಡೂನ್ ಮೂಲದ ವೈದ್ಯ ಮಂಜು ವಾದ್ವಾ ಅವರು ಈ ಸಾಧನೆ ಮಾಡಿದ್ದು, ಒಂದು ತಿಂಗಳಲ್ಲಿ ವಿಶ್ವದ ಯಾವುದೇ ವೈದ್ಯರು ಮಾಡದಷ್ಟು (331) ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಲಿಮ್ಕಾ ದಾಖಲೆ ಪುಟ ಸೇರಿದ್ದಾರೆ.

ಡೆಹ್ರಾಡೂನ್‌ನಲ್ಲಿರುವ ಮ್ಯಾಕ್ಸ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ನಿರ್ದೇಶಕ ಮತ್ತು ಮೂಳೆಗಳ ಕೀಲು ಶಸ್ತ್ರ ಚಿಕಿತ್ಸೆಯಲ್ಲಿ ತಜ್ಞರಾಗಿರುವ ಮಂಜು ವಾದ್ವಾ ಅವರು, 2013 ಮಾರ್ಚ್ ತಿಂಗಳಿನಲ್ಲಿ ಬರೋಬ್ಬರಿ 331 ಯಶಸ್ವಿ ಶಸ್ತ್ರ ಚಕಿತ್ಸೆ ನಡೆಸಿದ್ದಾರೆ. ಮಂಜು ವಾದ್ವಾ ಅವರ ಈ ಸಾಧನೆಯನ್ನು ಗುರುತಿಸಿರುವ ಲಿಮ್ಕಾ ತಂಡ 2014ರ ಸಾಲಿನ ಲಿಮ್ಕಾ ಪ್ರಶಸ್ತಿಯನ್ನು ಅವರಿಗೆ ನೀಡಿದೆ.

ತಮ್ಮ ಸಾಧನೆ ಬಗ್ಗೆ ಮಾತನಾಡಿರುವ ವೈದ್ಯ ಮಂಜು ವಾದ್ವಾ ಅವರು, 'ಪ್ರತಿಯೊಬ್ಬ ವೈದ್ಯನಿಗೂ ತನ್ನಲ್ಲಿ ಬರುವ ಜನರ ನೋವನ್ನು ನಿವಾರಿಸಿ, ಅವರು ಮೊದಲಿನಂತೆ ತಮ್ಮ ಸಾಮಾನ್ಯ ಜೀವನ ನಡೆಸಬೇಕೆಂಬ ಬಯಕೆ ಇರುತ್ತದೆ. ನೂತನ ತಂತ್ರಜ್ಞಾನಗಳು ವೈದ್ಯರ ಕೆಲಸವನ್ನು ಮತ್ತಷ್ಟು ಸಲೀಸು ಮಾಡಿದ್ದು, ಸಂಧಿ ಬದಲಿ ಜೋಡಣೆ ಕಾರ್ಯದಲ್ಲಿನ ತಂತ್ರಜ್ಞಾನಗಳು ವೈದ್ಯನ ಸಮಯವನ್ನು ಮಾತ್ರವಲ್ಲದೆ ನಿರ್ಧಿಷ್ಟ ಮತ್ತು ನಿಖರವಾಗಿ ಸಂದಿಗಳನ್ನು ಜೋಡಿಸುತ್ತದೆ. ಆ ಮೂಲಕ ಪ್ರತಿ ಸರ್ಜರಿಗೆ ಕೇವಲ 15 ರಿಂದ 20 ನಿಮಿಷಗಳಷ್ಟೇ ಸಾಕಾಗುತ್ತದೆ'.

'ಪ್ರಸ್ತುತ ನಾವು ಕೀಹೋಲ್ ತಂತ್ರಜ್ಞಾನವನ್ನು ಬಳಸಿಕೊಂಡು ಸಂಧಿಗಳ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದೆವೆ. ಈ ವಿಧಾನದ ಮೂಲಕ ರೋಗಿಯ ನೋವು ಬೇಗನೆ ಶಮನವಾಗಿ ಆತ ಶೀಘ್ರವಾಗಿ ಚೇತರಿಸಿಕೊಳ್ಳುವಲ್ಲಿ ಸಹಾಯಕವಾಗುತ್ತದೆ' ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.