ಈಗಿನ ಸುದ್ದಿ

ವಿಮಾನ ದುರಂತ: ಪರಿಹಾರ ಘೋಷಣೆ

ವಿಮಾನ ದುರಂತ: ಪರಿಹಾರ ಘೋಷಣೆ
Published On :

ಕೌಲಾಲಂಪುರ: ಅಪಘಾತಕ್ಕೀಡಾದ ಮಲೇಷ್ಯಾ ಏರ್‌ಲೈನ್ಸ್ ವಿಮಾನದ ಎಲ್ಲ ಪ್ರಯಾಣಿಕರ ಸಂಬಂಧಿಕರಿಗೆ ಮಲೇಷ್ಯಾ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು, ತಲಾ 5 ಸಾವಿರ ಡಾಲರ್‌ಗಳನ್ನು ನೀಡಲು ನಿರ್ಧರಿಸಿದೆ.

ಇಂದು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಮಲೇಷ್ಯಾ ಸರ್ಕಾರ ವಿಮಾನದಲ್ಲಿ ಮೃತಪಟ್ಟ ಎಲ್ಲ ಪ್ರಯಾಣಿಕರಿಗೆ ಸಂತಾಪ ಸೂಚಿಸಿದೆ. ಅಂತೆಯೇ ಮೃತರ ಸಂಬಂಧಿಕರಿಗೆ ಪ್ರಸ್ತುತ ತಲಾ 5 ಸಾವಿರ ಡಾಲರ್‌ಗಳನ್ನು ನೀಡುವ ಕುರಿತು ತೀರ್ಮಾನ ಕೈಗೊಂಡಿದೆ. ಆದರೆ ವಿಮಾನ ಪತನವಾಗಿರುವ ಸ್ಥಳಕ್ಕಾಗಿ ನಡೆಯುತ್ತಿರುವ ಶೋಧ ಕಾರ್ಯವನ್ನು ಮುಂದುವರೆಸಿದ್ದೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಲೇಷ್ಯಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಪ್ರಯಾಣಿಕರ ಸಂಬಂಧಿಕರು
ಇದೇ ವೇಳೆ ವಿಮಾನ ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರ ಸಂಬಂಧಿಕರು ಮಲೇಷ್ಯಾ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಲೇಷ್ಯಾ ಏರ್‌ಲೈನ್ಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಪ್ರಯಾಣಿಕರ ಸಾವಿಗೆ ಮಲೇಷ್ಯಾ ಸರ್ಕಾರವೇ ಕಾರಣ ಎನ್ನುತ್ತಿರುವ ಪ್ರತಿಭಟನಾಕಾರರ ಮಲೇಷ್ಯಾ ಸರ್ಕಾರವನ್ನು ಕೊಲೆಕಡುಕ ಸರ್ಕಾರ ಎಂದು ಕಿಡಿಕಾರಿದ್ದಾರೆ.

ಇನ್ನೂ ಪತ್ತೆಯಾಗದ ವಿಮಾನದ ಅವಶೇಷ
ಕಳೆದ ಮಾರ್ಚ್ 8ರಂದು ನಾಪತ್ತೆಯಾಗಿ ಅಪಘಾತಕ್ಕೀಡಾಗಿದ್ದ ಎಂಹೆಚ್ 370 ವಿಮಾನದ ಅವಶೇಷ ಇದುವರೆವಿಗೂ ಪತ್ತೆಯಾಗಿಲ್ಲ. ಈ ನಡುವೆ ಆಸ್ಟ್ರೇಲಿಯಾ ಬಳಿ ಚೀನಾ ಮಾರ್ಗದಲ್ಲಿ ವಿಮಾನ ಪತನವಾಗಿರಬಹುದು ಎಂಬ ಮಾಹಿತಿಯ ಹಿನ್ನಲೆಯಲ್ಲಿ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ. ಪತ್ತೆ ಕಾರ್ಯಾಚರಣೆಗಾಗಿ ಅಮೆರಿಕ ತನ್ನ ಅತ್ಯಾಧುನಿಕ ವಿಮಾನಗಳನ್ನು ರವಾನಿಸಿದ್ದು, ಇವು ಆಸ್ಟ್ರೇಲಿಯಾ ಬಳಿಯಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿವೆ.

ವಿಮಾನ ಪತನದ ಸಾಕ್ಷಿ ಕೇಳಿದ ಚೀನಾ

ನಿನ್ನೆ ವಿಮಾನ ಪತನವಾದ ವಿಚಾರವನ್ನು ಮಲೇಷ್ಯಾ ಪ್ರಧಾನಿ ಬಹಿರಂಗಗೊಳಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ಸರ್ಕಾರ ವಿಮಾನ ಪತನವಾದ ಕುರಿತು ಸಾಕ್ಷ್ಯಾಧಾರಗಳನ್ನು ನೀಡುವಂತೆ ಮಲೇಷ್ಯಾ ಸರ್ಕಾರವನ್ನು ಕೇಳಿದೆ. ಅಲ್ಲದೆ ವಿಮಾನದಲ್ಲಿದ್ದ ತನ್ನ ದೇಶದ ಪ್ರಯಾಣಿಕರ ಕುರಿತ ಮಾಹಿತಿ ಒದಗಿಸುವಂತೆಯೂ ಮನವಿ ಮಾಡಿದೆ.

ಒಟ್ಟಾರೆ ಸತತ 2 ವಾರಗಳ ಹಿಂದೆ ನಾಪತ್ತೆಯಾಗಿದ್ದ ವಿಮಾನದ ಕುರಿತ ನಿಗೂಢತೆ ಬಗೆಹರಿದಿದ್ದರೂ ಕೂಡ ವಿಮಾನ ಎಲ್ಲಿ ಮತ್ತು ಯಾವ ಕಾರಣಕ್ಕಾಗಿ ಪತನವಾಗಿರಬಹುದು ಎಂಬ ಪ್ರಶ್ನೆಗಳು ಹಾಗೆಯೇ ಕಾಡುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.