ಆರ್ ಕಾರ್ ಓನರ್ ಶಿವರಾಜ್ ಕುಮಾರ್!

ಶಿವಮೊಗ್ಗ: ನಟ ಶಿವರಾಜ್ ಕುಮಾರ್ ಬಳಿ ವಿವಿಧ ಕಂಪನಿಗಳಿಗೆ ಸೇರಿದ ಒಟ್ಟು 6 ಕಾರುಗಳಿವೆಯಂತೆ.. ಹೀಗೆಂದು ಸ್ವತಃ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಘೋಷಿಸಿದ್ದಾರೆ.
ಶಿವಮೊಗ್ಗ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿರುವ ಗೀತಾ ಶಿವರಾಜ್ ಕುಮಾರ್ ಅವರು ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಘೋಷಿಸಿಕೊಂಡಿರುವ ಆಸ್ತಿ ಮೊತ್ತದ ದಾಖಲೆಯಲ್ಲಿ ಈ ಅಂಶ ತಿಳಿದು ಬಂದಿದೆ. ನಟ ಶಿವರಾಜ್ ಕುಮಾರ್ ಅವರು ಟೊಯೋಟಾ ಫಾರ್ಚುನರ್, ಟಾಟಾ ಇನ್ನೋವಾ. ಸೋನಾಟ ಸೇರಿದಂತೆ ವಿವಿಧ ಕಂಪನಿಗಳ ಒಟ್ಟು ಆರು ಕಾರುಗಳನ್ನು ಹೊಂದಿದ್ದಾರೆ. ಅಂತೆಯೇ ಶಿವರಾಜ್ ಕುಮಾರ್ ಅವರ ಒಟ್ಟು ಆಸ್ತಿ ಮೌಲ್ಯ 11.5 ಕೋಟಿ ಮತ್ತು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ಸ್ಥಿರ ಮತ್ತು ಚರಾಸ್ಥಿಗಳ ಒಟ್ಟು ಮೌಲ್ಯ 6.17 ಕೋಟಿ ರುಪಾಯಿ ಎಂದು ತಿಳಿಸಲಾಗಿದೆ.
ಇದರಲ್ಲಿ 20 ಲಕ್ಷ ನಗದು ಗೀತಾ ಅವರ ಬಳಿ ಇದ್ದು, 6.29 ಲಕ್ಷ ರುಪಾಯಿಗಳನ್ನು ವಿವಿಧ ಬ್ಯಾಂಕುಗಳ ಖಾತೆಯಲ್ಲಿ ಇರಿಸಲಾಗಿದೆ. 32.45 ಲಕ್ಷ ಮೌಲ್ಯದ ವಜ್ರಾಭರಣ, 13.53 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 3.4 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳು ಅವರ ಬಳಿ ಇವೆಯಂತೆ. ಬೆಂಗಳೂರಿನಲ್ಲಿರುವ ವಾಣಿಜ್ಯ ಕಟ್ಟಡ ಒಳಗೊಂಡಂತೆ 3.5 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಗೀತಾ ಅವರು ಹೊಂದಿದ್ದಾರೆ.
ಪತಿ ಶಿವರಾಜ್ ಕುಮಾರ್ ಅವರಿಂದಲೇ ಸಾಲ ಪಡೆದ ಗೀತಾ..!
ಗೀತಾ ಶಿವರಾಜ್ ಕುಮಾರ್ ಅವರು ಸಲ್ಲಿಸಿರುವ ಈ ಆಸ್ತಿ ಘೋಷಣಾ ಪತ್ರದಲ್ಲಿ ಮತ್ತೊಂದು ಪ್ರಮುಖ ಅಂಶ ಬೆಳಕಿಗೆ ಬಂದಿದ್ದು, ತಮ್ಮ ಪತಿ ನಟ ಶಿವರಾಜ್ ಕುಮಾರ್ ಅವರಿಂದಲೇ ಗೀತಾ ಅವರು 83 ಲಕ್ಷದ 77 ಸಾವಿರ ರುಪಾಯಿಗಳನ್ನು ಸಾಲವಾಗಿ ಪಡೆದಿದ್ದಾರೆ. ಅಲ್ಲದೆ ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆಯಿಂದ ಗೀತಾ ಅವರು 23.41 ಲಕ್ಷ ಸಾಲ ಪಡೆದಿದ್ದಾರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


