ನಾಪತ್ತೆಯಾಗಿದ್ದ ಐಬಿಎಂ ಅಧಿಕಾರಿ ಇಬ್ರಾಹಿಂ ಶರೀಫ್ ಪತ್ತೆ

ಡೆಹ್ರಾಡೂನ್: ಒಡಿಶಾದ ಭುವನೇಶ್ವರದಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಐಬಿಎಂ ಅಧಿಕಾರಿ ಇಬ್ರಾಹಿಂ ಶರೀಫ್ ಅವರು ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಪತ್ತೆಯಾಗಿದ್ದಾರೆ.
ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಂಡೂರು ಮೂಲದ ಇಬ್ರಾಹಿಂ ಶರೀಫ್ ಅವರು, ಕಳೆದ 2013ರ ನವೆಂಬರ್ 25ರಂದು ಒಡಿಶಾದ ಭುವನೇಶ್ವರದಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಸತತ 4 ತಿಂಗಳ ಬಳಿಕ ಇಂದು ಡೆಹ್ರಾಡೂನ್ ನ ಪಾಟಿಯಾದಲ್ಲಿ ಇಬ್ರಾಹಿ ಶರೀಫ್ ಅವರು ಪತ್ತೆಯಾಗಿದ್ದಾರೆ. ಇಬ್ರಾಹಿಂ ಶರೀಫ್ ಅವರು ಭುವನೇಶ್ವರದಲ್ಲಿ ಗಣಿ ಸಹಾಯಕ ನಿಯಂತ್ರಣಾಧಿಕಾರಿಯಾಗಿದ್ದರು.
ಇಬ್ರಾಹಿಂ ಶರೀಫ್ ನಾಪತ್ತೆ ಹಿಂದೆ ಗಣಿ ಉಧ್ಯಮಿಗಳ ಕೈವಾಡ
ಇದೇ ವೇಳೆ ಇಬ್ರಾಹಿಂ ಶರೀಫ್ ಅವರ ನಾಪತ್ತೆ ಹಿಂದೆ ಭುವನೇಶ್ವರದ ಗಣಿ ಉದ್ಯಮಿಗಳ ಕೈವಾಡವಿತ್ತು ಎಂದು ಶರೀಫ್ ಕುಟುಂಬಸ್ಥರು ಈ ಹಿಂದೆ ಆರೋಪಿಸಿದ್ದರು. ಅಕ್ರಮ ಮೈನಿಂಗ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದ ಶರೀಫ್ ಅವರನ್ನು ಗಣಿ ಉದ್ಯಮಿಗಳೇ ಅಪಹರಿಸಿರಬಹುದೆಂದು ಕುಟುಂಬಸ್ಥರು ಆರೋಪಿಸಿದ್ದರು. ಈ ಸಂಬಂದ ಭುವನೇಶ್ವರದ ಇಂಪೋಸಿಟಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.
ಅಲ್ಲದೆ ತಮ್ಮ ಮಗ ಇಬ್ರಾಹಿಂ ಶರೀಫ್ ಅವರನ್ನು ಹುಡುಕಿ ಕೊಡುವಂತೆ ಶರೀಫ್ ತಂದೆ ಗಿಡ್ಡು ಸಾಬ್ ಅವರು ಕರ್ನಾಟಕ ಸರ್ಕಾರದ ಮೊರೆ ಹೋಗಿದ್ದರು. ಅಂತೆಯೇ ಕೇಂದ್ರದ ಗಣಿ ಇಲಾಖೆಯನ್ನು ಕೂಡ ಸಂಪರ್ಕಿಸಿ ತಮ್ಮ ಮಗನ ನಾಪತ್ತೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಮನವಿ ಮಾಡಿದ್ದರು.
ಇದೀಗ ಸತತ ನಾಲ್ಕು ತಿಂಗಳ ಬಳಿಕ ಉತ್ತರಖಂಡದ ಡೆಹ್ರಾಡೂನ್ ನಲ್ಲಿ ಇಬ್ರಾಹಿ ಶರೀಫ್ ಅವರು ಪತ್ತೆಯಾಗಿದ್ದು, ಭುವನೇಶ್ವರದಲ್ಲಿರುವ ಅವರ ನಿವಾಸಕ್ಕೆ ಅವರನ್ನು ಕರೆದೊಯ್ಯಲಾಗಿದೆ. ಶರೀಫ್ ನಾಪತ್ತೆಯಿಂದ ಕಂಗಾಲಾಗಿದ್ದ ಅವರ ಕುಟುಂಬಕ್ಕೆ ಇದೀಗ ನೆಮ್ಮದಿ ದೊರೆತಿದೆ.
ಇಬ್ರಾಹಿಂ ಶರೀಫ್ ಪತ್ತೆಯಾಗಿದ್ದಾರೆ ಎಂದು ಅವರ ಸಹೋದರ ಜಿಲಾನ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರು ಮಾತನಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಅವರಿಗೆ ಮನೆಯಿಂದಲೇ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಜಿಲಾನ್ ಹೇಳಿದ್ದಾರೆ. ಇಬ್ರಾಹಿಂ ನಾಪತ್ತೆ ಹಿಂದಿನ ಕಾರಣದ ಕುರಿತು ಮಾಹಿತಿ ಲಭ್ಯವಾಗಿಲ್ಲವಾದರೂ, ಅವರು ಗುಣಮುಖರಾದ ನಂತರವಷ್ಟೇ ನಾಪತ್ತೆ ಹಿಂದಿನ ಸತ್ಯ ಬಹಿರಂಗವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


