ಈಗಿನ ಸುದ್ದಿ

ಪಕ್ಷದ ನಿರ್ಧಾರ ತುಂಬಾ ನೋವು ತಂದಿದೆ: ಜಸ್ವಂತ್ ಸಿಂಗ್

ಪಕ್ಷದ ನಿರ್ಧಾರ ತುಂಬಾ ನೋವು ತಂದಿದೆ: ಜಸ್ವಂತ್ ಸಿಂಗ್
Published On :

ನವದೆಹಲಿ: ಬಿಜೆಪಿಯಿಂದ ನನನ್ನು ಉಚ್ಚಾಟಿಸಿದ ನಿರ್ಧಾರದಿಂದ ನಾನು ತೀವ್ರ ನೋವಿಗೊಳಗಾಗಿದ್ದೇನೆ ಎಂದು ಬಿಜೆಪಿಯ ಉಚ್ಛಾಟಿತ ನಾಯಕ ಜಸ್ವಂತ್ ಸಿಂಗ್ ಅವರು ಹೇಳಿದ್ದಾರೆ.

ರಾಜಸ್ತಾನದ ತಮ್ಮ ನಿವಾಸದಲ್ಲಿ ಮಾತನಾಡಿದ ಜಸ್ವಂತ್ ಸಿಂಗ್ ಅವರು ಬಿಜೆಪಿ ಮುಖಂಡರ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. 'ಪಕ್ಷದ ನಿರ್ಧಾರ ನನಗೆ ತುಂಬಾ ನೋವು ತಂದಿದೆ. ನಾವು ಯಾವ ಉದ್ದೇಶಕ್ಕಾಗಿ ಮತ್ತು ಯಾವ ದೃಷ್ಟಿಕೋನದಲ್ಲಿ ಪಕ್ಷವನ್ನು ಕಟ್ಟಿದ್ದೆವೋ ಅದು ಈಗ ಸಾಕಾರವಾಗುತ್ತಿಲ್ಲ. ಇಲ್ಲಿ ಕೆಲ ಮುಖಂಡರ ಮೂಗಿನ ನೇರಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ' ಎಂದು ಜಸ್ವಂತ್ ಸಿಂಗ್ ಹೇಳಿದರು.

'ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ ಮತ್ತು ಬೈರೋನ್ ಸಿಂಗ್ ಶೆಖಾವತ್‌ರಂತಹ ಹಿರಿಯ ನಾಯಕರು ಯಾವ ದೂರದೃಷ್ಟಿಯಲ್ಲಿ ಪಕ್ಷವನ್ನು ಕಟ್ಟಿದ್ದರೋ ಆ ಮಾರ್ಗದಲ್ಲಿ ಈಗಿನ ಬಿಜೆಪಿ ನಡೆಯುತ್ತಿಲ್ಲ. ಅಂದಿನ ಪಕ್ಷದಲ್ಲಿ ವೈಯುಕ್ತಿಕ ಹಿತಾಸಕ್ತಿಗಿಂತ ಜನರ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈಗ ಅಂತಹ ಕಾರ್ಯಗಳು ನಡೆಯುತ್ತಿಲ್ಲ. ಹಿರಿಯ ನಾಯಕರಿಗೆ ನೀಡಬೇಕಾದ ಕನಿಷ್ಟ ಗೌರವ ಕೂಡ ಪಕ್ಷದಲ್ಲಿ ಇಲ್ಲ' ಎಂದು ಜಸ್ವಂತ್ ಸಿಂಗ್ ಹೇಳಿದರು.

ಬಾರ್ಮೆರ್ ಕ್ಷೇತ್ರದಿಂದ ತಮಗೆ ಟಿಕೆಟ್ ನಿರಾಕರಿಸಿದ್ದ ಬಿಜೆಪಿ ಪಕ್ಷದ ವಿರುದ್ಧ ಜಸ್ವಂತ್ ಸಿಂಗ್ ಅವರು ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಪಕ್ಷ ಹಿರಿಯ ಮುಖಂಡನ ನಿರ್ಧಾರದಿಂದ ಮುಜುಗರಕ್ಕೀಡಾಗಿದ್ದ ಬಿಜೆಪಿ, ಜಸ್ವಂತ್ ಸಿಂಗ್ ಅವರ ಮನವೊಲಿಕೆಗೆ ಮುಂದಾಗಿಯಿತಾದರೂ, ಜಸ್ವಂತ್ ಸಿಂಗ್ ಅವರು ತಮ್ಮ ನಿರ್ಧಾರ ಬದಲಿಸಲಿಲ್ಲ. ಕೊನೆಗೆ ಪಕ್ಷ ವಿರೋಧಿ ಚಟುವಟಿಕೆಯ ಆರೋಪ ಹೊರಿಸಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರನ್ನು ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿಸಿ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಆದೇಶ ಹೊರಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.