ಸುಪ್ರೀಂ ಆದೇಶ: ಶ್ರೀನಿ ಆಪ್ತರನ್ನು ಹೊರಗಟ್ಟಿದ ಬಿಸಿಸಿಐ

ಅಧ್ಯಕ್ಷಗಾದಿ ವಹಿಸಿಕೊಂಡ ಗಾವಸ್ಕರ್, ಐಸಿ ಸದಸ್ಯರನ್ನು ಹೊರಗಟ್ಟುವ ಕಾರ್ಯಕ್ಕೆ ಚಾಲನೆ
ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಅನ್ವಯ ಬಿಸಿಸಿಐನಲ್ಲಿದ್ದ ಇಂಡಿಯಾ ಸಿಮೆಂಟ್ಸ್ ಸದಸ್ಯರನ್ನು ತೆಗೆದುಹಾಕಲಾಗಿದೆ.
ಶ್ರೀನಿವಾಸನ್ ಮಾಲೀಕತ್ವದ ಇಂಡಿಯಾ ಸಿಮೆಂಟ್ಸ್ ಸಂಸ್ಥೆ ಐಪಿಎಲ್ನಲ್ಲಿ ಚೆನ್ನೈ ತಂಡವನ್ನು ಖರೀದಿಸಿದ್ದು, ಕೇವಲ ಐಪಿಎಲ್ ಮಾತ್ರವಲ್ಲದೇ ಬಿಸಿಸಿಐನ ಇತರೆ ಮಂಡಳಿಗಳಲ್ಲಿಯೂ ಶ್ರೀನಿವಾಸನ್ ಸಂಸ್ಥೆಯ ಸದಸ್ಯರು ಕಾರ್ಯ ನಿರ್ವಹಿಸುತ್ತಿದ್ದರು. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಇದೀಗ ಇಂಡಿಯಾ ಸಿಮೆಂಟ್ಸ್ನ ಸದಸ್ಯರು ಬಿಸಿಸಿಐನಲ್ಲಿ ನಿರ್ವಹಿಸುತ್ತಿದ್ದ ಸ್ಥಾನವನ್ನು ತೊರೆಯುವಂತಾಗಿದೆ.
ಮೂಲಗಳ ಪ್ರಕಾರ ಬಿಸಿಸಿಐನ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ಆಪ್ತರೆಂದೇ ಹೇಳಲಾಗುತ್ತಿರುವ ಕಾಶಿ ವಿಶ್ವನಾಥನ್ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮತ್ತು ಎನ್ಎಡಿಎಸ್(ನ್ಯೂ ಏರಿಯಾ ಡೆವಲಪ್ಮೆಂಟ್ ಸಬ್ ಕಮಿಟಿ) ಸದಸ್ಯ, ಆರ್.ಐ ಪಳನಿ (ತಮಿಳುನಾಡು ಕ್ರಿಕೆಟ್ ಅಕಾಡೆಮಿಯ ಜಂಟಿ ಕಾರ್ಯದರ್ಶಿ), ಪಿಎಸ್ರಾಮನ್ (ತಮಿಳುನಾಡು ಕ್ರಿಕೆಟ್ ಅಕಾಡೆಮಿ ಉಪಾಧ್ಯಕ್ಷ), ಪ್ರಸನ್ನ ಕಣ್ಣನ್(ಐಪಿಎಲ್ನ ಮುಖ್ಯ ಹಣಕಾಸು ಅಧಿಕಾರಿ) ಅವರನ್ನು ಬಿಸಿಸಿಐನಿಂದ ಹೋರಹಾಕಲಾಗಿದೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಶುಕ್ರವಾರ ಮಧ್ಯಂತರ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಮತ್ತು ತಂಡದ ವಿರುದ್ದ ತೀವ್ರ ಕಿಡಿಕಾರಿತ್ತು. ಅಲ್ಲದೆ ಕೂಡಲೇ ಸ್ಥಾನ ತ್ಯಜಿಸುವಂತೆ ಆದೇಶ ನೀಡಿ ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಅವರು ಬಿಸಿಸಿಐ ಅಧ್ಯಕ್ಷ ಗಾದಿ ಏರುವಂತೆ ಸೂಚಿಸಿತ್ತು. ಅಲ್ಲದೆ ಬಿಸಿಸಿಐನಲ್ಲಿದ್ದ ಎಲ್ಲ ಇಂಡಿಯಾ ಸಿಮೆಂಟ್ಸ್ನ ಸದಸ್ಯರನ್ನು ತೆಗೆದುಹಾಕುವಂತೆ ಸಲಹೆ ನೀಡಿತ್ತು.
ಇದೀಗ ಸುನಿಲ್ ಗಾವಸ್ಕರ್ ಅವರು ಸುಪ್ರೀಂಕೋರ್ಟ್ ತೀರ್ಪಿನಂತೆ ಅಧ್ಯಕ್ಷಗಾದಿ ವಹಿಸಿಕೊಂಡಿದ್ದು, ಇಂಡಿಯಾ ಸಿಮೆಂಟ್ಸ್ ಸದಸ್ಯರನ್ನು ಬಿಸಿಸಿಐನಿಂದ ಹೊರಗಟ್ಟುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


