ಈಗಿನ ಸುದ್ದಿ

ನರೇಂದ್ರ ಮೋದಿ ಓರ್ವ ನರರೂಪ ರಾಕ್ಷಸ

ನರೇಂದ್ರ ಮೋದಿ ಓರ್ವ ನರರೂಪ ರಾಕ್ಷಸ
Published On :

ನವದೆಹಲಿ: ಕೇಂದ್ರ ಸಚಿವ ಬೇನಿ ಪ್ರಸಾದ್ ವರ್ಮಾ ಅವರು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ನರರೂಪ ರಾಕ್ಷಸ ಎಂದು ಕರೆದಿದ್ದಾರೆ.

ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಕೇಂದ್ರ ಸಚಿವ ಬೇನಿ ಪ್ರಸಾದ್ ವರ್ಮಾ ಅವರು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗುಜರಾತ್ ಗಲಭೆ ಕುರಿತಂತೆ ಮಾತನಾಡಿರುವ ಬೇನಿ ಪ್ರಸಾದ್ ವರ್ಮಾ ಅವರು ನರೇಂದ್ರ ಮೋದಿ ಅವರನ್ನು ನರರೂಪ ರಾಕ್ಷಸ ಎಂದು ಬಣ್ಣಿಸಿದ್ದಾರೆ. ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಮಸ್ಕಾನ್ವದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಬೇನಿ ಪ್ರಸಾದ್ ವರ್ಮಾ ಅವರು, ಹಿಂದೂ ಮುಸ್ಲಿಮರಲ್ಲಿ ಪರಸ್ಪರ ದ್ವೇಷ ಭಾವನೆಗಳನ್ನು ಹುಟ್ಟುಹಾಕಿ ಹೊಡೆದಾಡಿಕೊಳ್ಳುವಂತೆ ಮಾಡುವ ವ್ಯಕ್ತಿ ರಾಕ್ಷಸನಲ್ಲದೇ ಬೇರೇನು ಎಂದು ಬೇನಿ ಪ್ರಶ್ನಿಸಿದ್ದಾರೆ.

ಗುಜರಾತ್ ಗಲಭೆ ಕುರಿತಂತೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬೇನಿ ಪ್ರಸಾದ್ ವರ್ಮಾ ಅವರು, ನರೇಂದ್ರ ಮೋದಿಗೆ ಮನುಷ್ಯತ್ವವೇ ಇಲ್ಲ. ನೀನೇನು ಮನುಷ್ಯನೋ ಅಥವಾ ಬೇರೇನು ಹೇಳು ಎಂದು ಬೇನಿ ಪ್ರಸಾದ್ ವರ್ಮಾ ಹೇಳಿದ್ದಾರೆ. 'ನರೇಂದ್ರ ಮೋದಿಯಂತಹವರು ದೇಶಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕ. ಇಂತಹವರ ಕೈಗೆ ಆಡಳಿತ ದೊರೆತರೆ ದೇಶದ ಜನತೆಯ ಆತ್ಮಗೌರವ ಮಣ್ಣುಪಾಲಾಗುತ್ತದೆ. ಇಂತಹ ವ್ಯಕ್ತಿಗಳ ಸಮಾಜದ ಮೇಲೆ ತಮ್ಮ ಪ್ರಭುತ್ವ ಸಾಧಿಸುತ್ತಾರೆ. ದೇಶದಿಂದ ಕಾಂಗ್ರೆಸ್ ಅನ್ನು ಅಳಿಸಿಹಾಕಬೇಕು ಎಂದು ಮೋದಿ ಹೇಳುತ್ತಾರೆ. ನೂರಾರು ವರ್ಷ ಆಳಿದ ಬ್ರಿಟೀಷರಿದಂಲೇ ಕಾಂಗ್ರೆಸ್ ಪಕ್ಷವನ್ನು ಏನೂ ಮಾಡಲಾಗಲಿಲ್ಲ. ಇವರೇನು ಮಾಡಲು ಸಾಧ್ಯ. ಕಾಂಗ್ರೆಸ್ ಪಕ್ಷ ದೇಶದ ಜನತೆಯ ಪಕ್ಷವಾಗಿದ್ದು, ಬಿಜೆಪಿ ಒಬ್ಬ ವ್ಯಕ್ತಿಯ ಪಕ್ಷವಾಗಿದೆ' ಎಂದು ಬೇನಿ ಪ್ರಸಾದ್ ವರ್ಮಾ ಹೇಳಿದರು.

ಈ ಹಿಂದೆಯೂ ಕೂಡ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪದಪ್ರಯೋಗ ಮಾಡಿದ್ದ ಬೇನಿಗೆ ಕೇಂದ್ರ ಚುನಾವಣಾ ಆಯೋಗ ಎಚ್ಚರಿಕೆ ನೀಡಿತ್ತು. ಮತ್ತೆ ಇಂತಹ ಹೇಳಿಕೆಗಳನ್ನು ನೀಡಿದರೆ ನಿಮ್ಮ ಸಾರ್ವಜನಿಕ ಸಭೆಗಳನ್ನು ತಡೆಯಲಾಗುವುದು ಎಂದು ಎಚ್ಚರಿಸಿದ್ದರು.

ಆಯೋಗದ ಎಚ್ಚರಿಕೆಯ ಹೊರತಾಗಿಯೂ ಬೇನಿ ಪ್ರಸಾದ್ ವರ್ಮಾ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.