ಈಗಿನ ಸುದ್ದಿ

ಆಸ್ಟ್ರಾ ಕ್ಷಿಪಣಿ ಯಶಸ್ವಿ ಉಡಾವಣೆ

ಆಸ್ಟ್ರಾ ಕ್ಷಿಪಣಿ ಯಶಸ್ವಿ ಉಡಾವಣೆ
Published On :

ನವದೆಹಲಿ: ಭಾರತದ ಮೊದಲ ದೇಶೀ ನಿರ್ಮಿತ ಏರ್ ಟು ಏರ್ ಕ್ಷಿಪಣಿ ಆಸ್ಟ್ರಾವನ್ನು ಸೋಮವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಇಂದು ಮಧ್ಯಾಹ್ನ ಎಸ್‌ಯು 30ಎಂಕೆ ಯುದ್ಧ ವಿಮಾನದ ಮೂಲಕವಾಗಿ ಆಸ್ಟ್ರಾ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಗಿದ್ದು, ನಿಗದಿತ ಗುರಿಯನ್ನು ನಿಖರ ಸಮಯದಲ್ಲಿ ತಲುಪಿದೆ. ಆಸ್ಟ್ರಾ ಕ್ಷಿಪಣಿಯನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ್ದು, ದೇಶಿ ನಿರ್ಮಿತ ಮೊದಲ ಏರ್ ಟು ಏರ್ ಕ್ಷಿಪಣಿ ಎಂಬ ಕೀರ್ತಿಗೆ ಆಸ್ಟ್ರಾ ಪಾತ್ರವಾಗಿದೆ.

ಭಾರತದ ಇತರೆ ಕ್ಷಿಪಣಿಗಳಿಗೆ ಹೋಲಿಸದರೆ ಆಸ್ಟ್ರಾದಲ್ಲಿ ಸಾಕಷ್ಟು ವಿಶೇಷತೆಗಳಿದ್ದು, ಪ್ರಮುಖವಾಗಿ ಇದೊಂದು ಏರ್ ಟು ಏರ್ ಕ್ಷಿಪಣಿಯಾಗಿದೆ. ಅಂದರೆ ಕಣ್ ಅಳತೆಯನ್ನೂ ಮೀರಿದ ಗುರಿಗಳನ್ನು ನಿಖರವಾಗಿ ತಲುಪಿ ಕ್ಷಣ ಮಾತ್ರದಲ್ಲಿ ಧ್ವಂಸಗೊಳಿಸಬಲ್ಲ ಶಕ್ತಿ ಆಸ್ಟ್ರಾಗಿದೆ. ಕ್ಷಿಪಣಿ ಯಶಸ್ವಿ ಉಡಾವಣೆ ಕುರಿತು ಮಾತನಾಡಿರುವ ಹಿರಿಯ ವಿಜ್ಞಾನಿ ಮತ್ತು ಡಿಆರ್‌ಡಿಓ ಮುಖ್ಯಸ್ಥ ಅವಿನಾಶ್ ಚಂದರ್ ಅವರು, ಯೋಜನೆಯ ಇತರೆ ವಿಜ್ಞಾನಿಗಳನ್ನು ಅಭಿನಂಧಿಸಿದ್ದಾರೆ.

'ಆಸ್ಟ್ರಾ ಕ್ಷಿಪಣಿ ಯಶಸ್ವಿ ಉಡಾವಣೆ ಯೋಜನೆಯಲ್ಲಿ ಭಾಗಿಯಾಗಿದ್ದ ಎಲ್ಲ ವಿಜ್ಞಾನಿಗಳಲ್ಲಿ ಸಂತಸ ಉಂಟುಮಾಡಿದೆ. ಆಸ್ಟ್ರಾ ಯಶಸ್ವಿಯಿಂದಾಗಿ ಭಾರತದ ವಾಯುದಳಕ್ಕೆ ಮತ್ತೊಂದು ಪ್ರಮುಖ ಅಸ್ತ್ರ ದೊರೆತಂತಾಗಿದೆ. ಶೀಘ್ರದಲ್ಲಿಯೇ ಆಸ್ಟ್ರಾವನ್ನು ಮತ್ತೊಂದು ಪ್ರಮುಖ ಪರೀಕ್ಷೆಯಲ್ಲಿ ತೊಡಗಿಸಲಾಗುತ್ತದೆ. ದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನಕ್ಕೆ ಆಸ್ಟ್ರಾವನ್ನು ಅಳವಡಿಸಿ ಪರೀಕ್ಷಿಸಲಾಗುತ್ತದೆ ಎಂದು ಅವಿನಾಶ್ ಚಂದರ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.