ಹಿಂಟ್ ಅಂಡ್ ರನ್: ಸಲ್ಮಾನ್ರನ್ನು ಗುರ್ತಿಸಿದ ಸಾಕ್ಷಿಗಳು

ಮುಂಬೈ: 2002ರ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆ ನಡೆದಿದ್ದು, ಇಬ್ಬರು ಪ್ರತ್ಯಕ್ಷ ಸಾಕ್ಷಿಗಳು ಸಲ್ಮಾನ್ ಖಾನ್ರನ್ನು ಗುರುತಿಸಿದ್ದಾರೆ.
24 ವರ್ಷದ ಮಹಮದ್ ಮುಸ್ಲಿಂ ಶೇಖ್ ಅವರು, ಘಟನೆ ನಡೆದ ದಿನ ರಾತ್ರಿ ಸುಮಾರು 2.45ರ ವೇಳೆಯಲ್ಲಿ ನಾನು ಸಲ್ಮಾನ್ ಖಾನ್ ಅವರು ಕಾರು ಚಾಲಕನ ಸೀಟಿನಲ್ಲಿದ್ದರು ಎಂದು ಹೇಳಿದ್ದಾರೆ. 'ಅಂದು ರಾತ್ರಿ ನಾವು ಮಲಗಿದ್ದಾಗ ನನಗೆ ಕಾರಿನ ಶಬ್ದ ಕೇಳಿತು. ನಾನು ಕಣ್ಣು ಬಿಟ್ಟಾಗ ಬಿಳಿ ಬಣ್ಣದ ದೊಡ್ಡಕಾರು ನನ್ನ ಎಡಗಾಲಿನ ಮೇಲೆ ಹರಿದಿತ್ತು. ಈ ವೇಳೆ ಸಾಕಷ್ಟು ಜನ ನೆರೆದಿದ್ದರು. ಸಲ್ಮಾನ್ ಖಾನ್ರನ್ನು ಸ್ಥಳೀಯರು ಹಿಡಿದುಕೊಂಡರು. ಓರ್ವ ಪೊಲೀಸ್ ಪೇದೆ ಕೂಡ ಸಲ್ಮಾನ್ ಖಾನ್ರನ್ನು ಹಿಡಿದುಕೊಂಡರು. ಆಗ ನನ್ನ ಸ್ನೇಹಿತರಾದ ಅಬ್ದುಲ್ ಮತ್ತು ಮುನ್ನು ಕಾರಿನ ಕೆಳಗೆ ಇದ್ದರು' ಎಂದು ಮುಸ್ಲಿಂ ಶೇಖ್ ಸಾಕ್ಷ್ಯ ನುಡಿದಿದ್ದಾರೆ.
ಸುಮಾರು 12 ವರ್ಷಗಳ ಹಿಂದೆ ನಡೆದಿದ್ದ ಈ ಪ್ರಕರಣದಲ್ಲಿ ಮೇಲ್ನೋಟಕ್ಕೇ ಸಲ್ಮಾನ್ ಖಾನ್ ಅವರು ತಪ್ಪೆಸಗಿರುವುದು ಸಾಬೀತಾಗಿತ್ತು. ಈ ಹಿಂದೆ ಸಲ್ಮಾನ್ ಖಾನ್ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಪ್ರಕರಣದ ಗಂಭೀರತೆಯನ್ನು ಅರಿತ ನ್ಯಾಯಾಲಯ ಮತ್ತೆ 17 ಮಂದಿಯ ಸಾಕ್ಷ್ಯಾಧರಗಳನ್ನು ಪರಿಶೀಲಿಸಿ, ಜುಲೈ 24ರಂದು 304(2), 379, 338, 427 ಅಡಿಯಲ್ಲಿ ಚಾರ್ಜ್ಶೀಟ್ ದಾಖಲಿಸಿಕೊಂಡಿತ್ತು.
2002 ಸೆಪ್ಟೆಂಬರ್ 28ರ ರಾತ್ರಿಯಲ್ಲಿ ನಟ ಸಲ್ಮಾನ್ ಖಾನ್ ಕುಡಿದ ಮತ್ತಿನಲ್ಲಿ ಬಾಂದ್ರಾದ ಬೇಕರಿಯೊಂದರ ಬಳಿ ಫುಟ್ಬಾತ್ ಮೇಲೆ ಕಾರು ಚಲಾಯಿಸಿದ್ದರು. ಈ ವೇಳೆ ಓರ್ವ ಮೃತಪಟ್ಟು ನಾಲ್ವರಿಗೆ ಗಂಭೀರ ಗಾಯಗಳಾಗಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


