ಸೋಮನಾಥ್ ಭಾರ್ತಿ ವಿರುದ್ಧ ಪ್ರಕರಣ ದಾಖಲು

ಅಮೇಥಿ: ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡ ಮತ್ತು ದೆಹಲಿ ಮಾಜಿ ಸಚಿವ ಸೋಮನಾಥ್ ಭಾರ್ತಿ ವಿರುದ್ಧ ಚುನಾವಣಾ ಆಯೋಗ ಪ್ರಕರಣ ದಾಖಲಿಸಿಕೊಂಡಿದೆ.
ಅಮೆಥಿಯಲ್ಲಿ ನಾಳೆ ಚುನಾವಣೆ ನಡೆಯಲಿದ್ದು, ನಿನ್ನೆಯೇ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಹೀಗಾಗಿ ಅಭ್ಯರ್ಥಿಗಳನ್ನು ಹೊರತುಪಡಿಸಿ ರಾಜಕೀಯ ಪಕ್ಷಗಳ ನಾಯಕರೆಲ್ಲರೂ ಕ್ಷೇತ್ರವನ್ನು ತೊರೆಯಬೇಕು. ಆದರೆ ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡ ಸೋಮನಾಥ್ ಭಾರ್ತಿ ಅವರು ಮಾತ್ರ ಅಮೇಥಿಯಲ್ಲಿ ಉಳಿದಿರುವುದರಿಂದ ಆಯೋಗ ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದೆ.
ಅಮೇಥಿ ಜಿಲ್ಲಾಡಳಿತ ಸೋಮನಾಥ್ ಭಾರ್ತಿ ವಿರುದ್ಧ ಐಪಿಸಿ ಸೆಕ್ಷನ್ 144 ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಿಕೊಂಡಿದೆ. ಸೋಮನಾಥ್ ಭಾರ್ತಿ ಸ್ಥಳೀಯ ಮತದಾರರಲ್ಲ. ಅಲ್ಲದೆ ಅಭ್ಯರ್ಥಿ ಕೂಡ ಅಲ್ಲ. ಹೀಗಿರುವಾಗ ಅವರು ಕ್ಷೇತ್ರದಲ್ಲಿ ಇರುವ ಹಾಗಿಲ್ಲ ಎಂದು ಜಿಲ್ಲಾಡಳಿತ ದೂರು ದಾಖಲಿಸಿಕೊಂಡಿದೆ. ನಿನ್ನೆ ಸಂಜೆ 6 ಗಂಟೆಗೇ ಬಹಿರಂಗ ಪ್ರಚಾರಕ್ಕೆ ಅಂತ್ಯ ಬಿದಿದ್ದರೂ ಸೋಮನಾಥ್ ಭಾರ್ತಿ ಅವರು ಮಾತ್ರ ತಮ್ಮ ಬೆಂಬಲಿಗರೊಂದಿಗೆ ಅಮೇಥಿ ಕ್ಷೇತ್ರದ ಅಭ್ಯರ್ಥಿ ಕುಮಾರ್ ವಿಶ್ವಾಸ್ ಅವರ ಕುಟುಂಬದೊಂದಿಗೆ ಇದ್ದರು.
ಹೀಗಾಗಿ ಅವರು ರಾತ್ರಿ 11 ಗಂಟೆಯೊಳಗೆ ಕ್ಷೇತ್ರ ತೊರೆಯುವಂತೆ ನಿನ್ನೆ ಅಮೇಥಿ ಜಿಲ್ಲಾಡಳಿತ ಸೂಚಿಸಿತ್ತು. ಆದರೆ ಸೋಮನಾಥ್ ಭಾರ್ತಿ ಅವರು ಕ್ಷೇತ್ರ ತೊರೆಯದ ಹಿನ್ನಲೆಯಲ್ಲಿ ಅವರ ವಿರುದ್ಧ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ.
ಸೀಮಾಂಧ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಬಿಹಾರ ರಾಜ್ಯಗಳಲ್ಲಿ ನಾಳೆ ಮತದಾನ ನಡೆಯಲಿದ್ದು, ಇಂದು ಮನೆ ಮನೆ ಪ್ರಚಾರಕ್ಕೆ ಅಂತ್ಯ ಬೀಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


