ಈಗಿನ ಸುದ್ದಿ

ದೊಡ್ಡ ಗೆಲುವು, ಚಿಕ್ಕ ಸರ್ಕಾರ

ದೊಡ್ಡ ಗೆಲುವು, ಚಿಕ್ಕ ಸರ್ಕಾರ
Published On :

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಭೂತ ಪೂರ್ವ ಗೆಲುವು ದಾಖಲಿಸಿ, ಅಧಿಕಾರದ ಗದ್ದುಗೆ ಏರುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕೇವಲ 45 ಮಂದಿ ಸಚಿವರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಸತತ 10 ವರ್ಷಗಳ ನಂತರ ಕೇಂದ್ರದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಗೇರುತ್ತಿದ್ದು, ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲ್ಲಿದ್ದಾರೆ. ಇಂದು ಸಂಜೆ 6 ಗಂಟೆಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಮೋದಿ ಕ್ಯಾಬಿನೆಟ್‌ನಲ್ಲಿ 45 ಮಂದಿ ಸಚಿವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಈ ಪೈಕಿ 24 ಮಂದಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದರೆ, 11 ಮಂದಿ ರಾಜ್ಯ ಖಾತೆ ಸಚಿವರಾಗಿದ್ದಾರೆ. 10 ಮಂದಿಗೆ ಸ್ವತಂತ್ರ ಖಾತೆಯ ಜಾವಾಬ್ದಾರಿ ವಹಿಸಲಾಗುತ್ತಿದೆ.

ಕಳೆದ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ತಮ್ಮ ಸಂಪುಟದಲ್ಲಿ ಒಟ್ಟು 70 ಮಂದಿ ಸಚಿವರನ್ನು ಹೊಂದಿದ್ದರು.

ಮುರಳಿ ಮನೋಹರ್ ಜೋಷಿಗಿಲ್ಲ ಸಚಿವ ಸ್ಥಾನ

ಇದೇ ವೇಳೆ 75 ವರ್ಷಕ್ಕಿಂತಲೂ ಅಧಿಕ ವಯಸ್ಸಾಗಿರುವ ಹಿರಿಯರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿರಲು ಬಿಜೆಪಿ ನಿರ್ಧರಿಸಿದೆ. 75ಕ್ಕೂ ಅಧಿಕ ವಯಸ್ಸಾಗಿರುವ ನಾಯಕರಿಂದ ಪ್ರಮುಖ ಹುದ್ದೆಗಳನ್ನು ನಿಭಾಯಿಸಲು ಸಾಧ್ಯವಿಲ್ಲದಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ 75 ಅಥವಾ ಅದಕ್ಕಿಂತಲೂ ಅಧಿಕ ವಯಸ್ಸಾಗಿರುವ ಹಿರಿಯ ನಾಯಕರಿಗೆ ಮೋದಿ ಕ್ಯಾಬಿನೆಟ್‌ನಲ್ಲಿ ಸ್ಥಾನವಿಲ್ಲ. ಹೀಗಾಗಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ 80 ವರ್ಷದ ಮುರಳಿ ಮನೋಹರ್ ಜೋಷಿ ಅವರನ್ನು ಈ ಬಾರಿಯ ಸಂಪುಟದಿಂದ ಹೊರಗುಳಿಸಲಾಗಿದೆ. ಮುರಳಿ ಮನೋಹರ್ ಜೋಷಿ ಅವರು ಕಳೆದ ವಾಜಪೇಯಿ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ಸಚಿವರಾಗಿದ್ದರು.

ಇವರಂತೆಯೇ ವಾಜಪೇಯಿ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದ ಹಿರಿಯ ನಾಯಕರಾದ ಶಾಂತಾಕುಮಾರ್, ಬಿ.ಸಿ.ಖಂಡುರಿ ಅವರು ಮೋದಿ ಸಂಪುಟದಿಂದ ಹೊರಗುಳಿಯಲಿದ್ದಾರೆ. ನರೇಂದ್ರ ಮೋದಿ ಸಂಪುಟದ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಹಲವು ಹಿರಿಯ ಸಂಸದರಿದ್ದು ಈ ಪೈಕಿ 74 ವರ್ಷದ ನಜ್ಮಾ ಹೆಪ್ಟುಲ್ಲಾ ಮತ್ತು 73 ವರ್ಷದ ಕಲ್ರಾಜ್ ಮಿಶ್ರಾ ಅವರು ಮೋದಿ ಕ್ಯಾಬಿನೆಟ್‌ನಲ್ಲಿ ಸ್ಥಾನಗಳಿಸಿದ್ದಾರೆ. ಉಳಿದಂತೆ ಬಹುತೇಕ ನಾಯಕರು 60 ವರ್ಷದ ಆಸುಪಾಸಿನಲ್ಲಿದ್ದಾರೆ.

ನರೇಂದ್ರ ಮೋದಿ ಅವರ ನೇತೃತ್ವದ ಸಂಪುಟ ಸಚಿವರ ಪಟ್ಟಿ ಇಂತಿದೆ
ಸಂಪುಟ ದರ್ಜೆ ಸಚಿವರು
ರಾಜನಾಥ್ ಸಿಂಗ್ (62 ವರ್ಷ)-ಗೃಹ ಖಾತೆ
ಸುಷ್ವಾ ಸ್ವರಾಜ್(62 ವರ್ಷ)- ವಿದೇಶಾಂಗ ವ್ಯವಹಾರ ಖಾತೆ
ಅರುಣ್ ಜೇಟ್ಲಿ (62 ವರ್ಷ)- ಹಣಕಾಸು ಮತ್ತು ರಕ್ಷಣಾ ಖಾತೆ
ರವಿಶಂಕರ್ ಪ್ರಸಾದ್(59 ವರ್ಷ)- ಕಾನೂನು ಮತ್ತು ದೂರಸಂಪರ್ಕ ಖಾತೆ
ಅನಂತ್ ಕುಮಾರ್(54 ವರ್ಷ)-ರಾಸಾಯನಿಕ ಮತ್ತು ರಸಗೊಬ್ಬರ ಖಾತೆ
ಡಿ.ವಿ.ಸದಾನಂದಗೌಡ(61 ವರ್ಷ)-ರೇಲ್ವೆ ಖಾತೆ
ನಿತಿನ್ ಗಡ್ಕರಿ(57 ವರ್ಷ)-ಸಾರಿಗೆ ಮತ್ತು ಬಂದರು ಖಾತೆ
ವೆಂಕಯ್ಯ ನಾಯ್ಡು(64 ವರ್ಷ)-ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರ ಖಾತೆ
ಮನೇಕಾ ಗಾಂಧಿ(57 ವರ್ಷ)- ಮಹಿಳಾ ಮತ್ತು ಮಕ್ಕಳ ಖಾತೆ
ಸ್ಮೃತಿ ಇರಾನಿ(38 ವರ್ಷ)- ಮಾನವ ಸಂಪನ್ಮೂಲ ಖಾತೆ
ನಜ್ಮಾ ಹೆಫ್ತುಲ್ಲಾ (74 ವರ್ಷ)-ಅಲ್ಪ ಸಂಖ್ಯಾತ ಖಾತೆ
ರಾಮ್ ವಿಲಾಸ್ ಪಾಸ್ವಾನ್(67 ವರ್ಷ)-ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಖಾತೆ
ಟಿಡಿಪಿಯ ಅಶೋಕ್ ಗಜಪತಿ ರಾಜು(56 ವರ್ಷ)- ನಾಗರೀಕ ವಿಮಾನಯಾನ ಖಾತೆ
ಉಮಾ ಭಾರತಿ(55 ವರ್ಷ)-ಜಲಸಂಪನ್ಮೂಲ ಖಾತೆ ಮತ್ತು ಗಂಗಾ ಸ್ವಚ್ಛತಾ ಇಲಾಖೆ
ಗೋಪಿನಾಥ್ ಮುಂಡೆ(64 ವರ್ಷ)-ಗ್ರಾಮೀಣಾಭಿವೃದ್ಧಿ ಖಾತೆ
ಹರ್ಸಿಮ್ರಾತ್ ಕೌರ್ ಬಾದಲ್(47 ವರ್ಷ)-ಆಹಾರ ಸಂಸ್ಕರಣೆ ಖಾತೆ
ನರೇಂದ್ರ ಸಿಂಗ್ ಟೋಮರ್(56 ವರ್ಷ)-ಉಕ್ಕು ಮತ್ತು ಗಣಿ ಖಾತೆ
ರಾಧಾಮೋಹನ್ ಸಿಂಗ್(64 ವರ್ಷ)-ಕೃಷಿ ಖಾತೆ
ಥಾವರ್ ಸಿಂಗ್ ಗೆಹ್ಲೋಟ್(66 ವರ್ಷ)-ಸಾಮಾಜಿಕ ನ್ಯಾಯ
ಡಾ.ಹರ್ಷವರ್ದನ್(59 ವರ್ಷ)- ಆರೋಗ್ಯ ಖಾತೆ
ನಿರ್ಮಲಾ ಸೀತಾರಾಮನ್ (54 ವರ್ಷ)-ವಾಣಿಜ್ಯ ಖಾತೆ
ಕಲ್‌ರಾಜ್ ಮಿಶ್ರಾ (73 ವರ್ಷ)- ಸಣ್ಣ ಕೈಗಾರಿಕಾ ಖಾತೆ
ಜುವಾಲ್ ಒರಂ(53 ವರ್ಷ)-ಬುಡಕಟ್ಟು ವ್ಯವಹಾರಾ ಖಾತೆ
ಶಿವಸೇನಾ ಪಕ್ಷದ ಅನಂತ್ ಗೀತೆ(62 ವರ್ಷ)-ಖಾತೆ ಹಂಚಿಕೆಯಾಗಿಲ್ಲ

ಸ್ವತಂತ್ರ ಖಾತೆ ಸಚಿವರು
ಪ್ರಕಾಶ್ ಜಾವೇಡ್ಕರ್(63 ವರ್ಷ)-ವಾರ್ತಾ ಮತ್ತು ಪ್ರಸಾರ ಖಾತೆ, ಪರಿಸರ ಖಾತೆ
ಪಿಯೂಶ್ ಗೋಯಲ್(49 ವರ್ಷ)-ಕಲ್ಲಿದ್ದಲು ಮತ್ತು ಇಂಧನ ಖಾತೆ
ಧರ್ಮೇಂದ್ರ ಪ್ರದಾನ್(44 ವರ್ಷ)-ಪೆಟ್ರೋಲಿಯಂ ಖಾತೆ
ರಾವ್ ಇಂದ್ರಜೀತ್ ಸಿಂಗ್(63 ವರ್ಷ)-ಯೋಜನಾ ಆಯೋಗ
ವಿ.ಕೆ.ಸಿಂಗ್(63 ವರ್ಷ)
ಸಂತೋಷ್ ಕುಮಾರ್ ಗಂಗಾವರ್(65 ವರ್ಷ)
ಶ್ರೀಪಾದ್ ನಾಯಕ್(61 ವರ್ಷ)
ಸರಬಾನಂದ್ ಸೋನೋವಾಲ್ (51 ವರ್ಷ)
ಡಾ.ಜಿತೇಂದ್ರ ಸಿಂಗ್(58 ವರ್ಷ)

ರಾಜ್ಯ ಖಾತೆ ಸಚಿವರು
ಜಿ.ಎಂ.ಸಿದ್ದೇಶ್ವರ್(61 ವರ್ಷ)
ಮನೋಜ್ ಸಿನ್ಹಾ(54 ವರ್ಷ)
ನಿಹಾಲ್ ಚಂದ್(ವರ್ಷ)
ಉಪೇಂದ್ರ ಕುಶ್‌ವಾಹ್(54 ವರ್ಷ)
ಪಿ.ರಾಧಾಕೃಷ್ಣನ್ (ವರ್ಷ)
ಕಿರಣ್ ರಿಜಿಜು (ವರ್ಷ)
ಕೃಷ್ಣಪಾಲ್ ಗುಜ್ಜರ್(57 ವರ್ಷ)
ಡಾ.ಸಂಜೀವ್ ಕುಮಾರ್ ಬಲಿಯಾನ್(35 ವರ್ಷ)
ಮನ್ಸುಕ್ ಭಾಯ್ (ವರ್ಷ)
ಸುದರ್ಶನ್ ಭಗತ್(44 ವರ್ಷ)
ವಿಷ್ಣುದೇವ್(50 ವರ್ಷ)
ರಾವ್ ಸಾಹೇಬ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.