ಸಂತೋಷದಿಂದಿರುವ ಸಂಗಾತಿಯಿಂದ ಆರೋಗ್ಯ ವೃದ್ಧಿ: ಅಧ್ಯಯನ

ನಿಮ್ಮ ಸಂಗಾತಿ ಯಾವಾಗಲೂ ಖುಷಿ ಖುಷಿಯಾಗಿ, ಸಂತೋಷವಾಗಿ ನಿಮ್ಮ ಜೊತೆಗಿದ್ದರೆ ನಿಮ್ಮ ಆರೋಗ್ಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ನಿಮ್ಮ ಸಂಗಾತಿ ಯಾವಾಗಲೂ ಖುಷಿ ಖುಷಿಯಾಗಿ, ಸಂತೋಷವಾಗಿ ನಿಮ್ಮ ಜೊತೆಗಿದ್ದರೆ ನಿಮ್ಮ ಆರೋಗ್ಯ ಹೆಚ್ಚಾಗುತ್ತದೆ. ನೀವು ಮಧ್ಯ ವಯಸ್ಸಿಗೆ ಬಂದರೂ ಕೂಡ ನಿಮ್ಮ ಸಂಗಾತಿಯ ಖುಷಿಯಿಂದಾಗಿ ನಿಮ್ಮ ಖುಷಿ ಹೆಚ್ಚಾಗಿ ಇನ್ನಷ್ಟು ಸದೃಢರಾಗುತ್ತೀರಿ ಎನ್ನುತ್ತಾರೆ ಸಂಶೋಧಕರು.
''ಸಂಶೋಧಕರ ಈ ಅಧ್ಯಯನದಿಂದ ಸಂತೋಷ ಮತ್ತು ಆರೋಗ್ಯದ ಮಧ್ಯೆ ಹೇಗೆ ಸಂಬಂಧವಿದೆ ಎಂಬ ಜನರ ಗ್ರಹಿಕೆಯನ್ನು ವಿಸ್ತಾರ ಮಾಡುತ್ತದೆ. ಇದರಿಂದ ಸಾಮಾಜಿಕ ಸಂಬಂಧಗಳು ಕೂಡ ಹೆಚ್ಚಾಗುತ್ತವೆ ಎನ್ನುತ್ತಾರೆ ವಿಲಿಯಮ್ ಚೊಪಿಕ್. ಇವರು ಮಿಚಿಗಾನ್ ವಿಶ್ವವಿದ್ಯಾಲಯದಲ್ಲಿ ಮನಃಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.
ಮಧ್ಯ ವಯಸ್ಸಿನ ಸಾವಿರದ 981 ಜೋಡಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಖುಷಿ, ಸಂತೋಷ, ಸಮಾಧಾನ ಹೊಂದಿರುವ ಸಂಗಾತಿಗಳನ್ನು ಪಡೆದ ವ್ಯಕ್ತಿ ದೀರ್ಘಾವಧಿಯಲ್ಲಿ ಸುಖವಾಗಿ ಜೀವನ ನಡೆಸುತ್ತಾರೆ. ತಮ್ಮ ವೈಯಕ್ತಿಕ ಸಂತೋಷಕ್ಕಿಂತ ಸಂಗಾತಿಯ ಸಂತೋಷ ಜೀವನದಲ್ಲಿ ಮುಖ್ಯವಾಗುತ್ತದೆ ಎನ್ನುತ್ತದೆ ಸಂಶೋಧಕರ ವರದಿ.
ಸಂತೋಷ, ತೃಪ್ತಿ ಹೊಂದಿರುವ ವ್ಯಕ್ತಿ ತನ್ನ ಸಂಗಾತಿಗೆ ಹೆಚ್ಚಿನ ಬೆಂಬಲ ನೀಡುತ್ತಾರೆ . ಅವರ ಒಳಿತು-ಕೆಡಕುಗಳ ಬಗ್ಗೆ ಹೆಚ್ಚು ಗಮನ ವಹಿಸುತ್ತಾರೆ. ಅದೇ ಹೆಚ್ಚು ದುಃಖ, ಬೇಸರ ಮನಸ್ಸಿನಲ್ಲಿ ಹೊಂದಿರುವವರು ಅವರ ಸ್ವಂತದ ಬಗ್ಗೆ ಹೆಚ್ಚು ಕಾಳಜಿ ಹೊಂದಿರುತ್ತಾರೆ.
ಸಾಮಾನ್ಯವಾಗಿ ಸಂತೋಷದಲ್ಲಿರುವ ಸಂಗಾತಿಗಳು ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುತ್ತಾರೆ. ಅವರ ಜೀವನ ಸುಲಭವಾಗಿ ಸಾಗುತ್ತಿರುತ್ತದೆ. ಪ್ರತಿದಿನ ಸರಿಯಾಗಿ ನಿದ್ದೆ, ಉತ್ತಮ ಆಹಾರ ಸೇವನೆ, ವ್ಯಾಯಾಮ ಇತ್ಯಾದಿಗಳನ್ನು ಮಾಡುತ್ತಿರುತ್ತಾರೆ ಎನ್ನುತ್ತಾರೆ ಚೊಪಿಕ್.
ಸಂಗಾತಿ ಯಾವಾಗಲೂ ಬೇಸರ, ದುಃಖ, ಹತಾಶೆ, ಸಿಟ್ಟಿನಲ್ಲಿದ್ದರೆ ಆಗ ಇನ್ನೊಬ್ಬರಿಗೆ ಜೀವನದಲ್ಲಿ ಒತ್ತಡವುಂಟಾಗಿ ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. 
ಈ ಅಧ್ಯಯನದಲ್ಲಿ 50 ವರ್ಷದಿಂದ 94 ವರ್ಷದವರೆಗಿನ ಸಂಗಾತಿಗಳು ಭಾಗಿಯಾಗಿದ್ದರು. ಸುಮಾರು ಆರು ವರ್ಷಗಳವರೆಗೆ ಸಂಗಾತಿಗಳ ಸಂತೋಷ, ಸ್ವಯಂ ಆರೋಗ್ಯ ಮತ್ತು ದೈಹಿಕ ಚಟುವಟಿಕೆಗಳನ್ನು ನೋಡಲಾಗಿತ್ತು. ಇಲ್ಲಿ ಗಂಡ-ಹೆಂಡತಿ ಮಧ್ಯೆ ವ್ಯತ್ಯಾಸವಿರಲಿಲ್ಲ. 
ಈ ಅಧ್ಯಯನ ಅಮೆರಿಕಾದ ಪತ್ರಿಕೆ ಹೆಲ್ತ್ ಸೈಕಾಲಜಿಯಲ್ಲಿ ಪ್ರಕಟಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com