ಬಿಕಿನಿ ಮಾಡೆಲ್ ಮಾರಾ ಮಗುವಿಗೆ ಎದೆಹಾಲುಣಿಸುತ್ತ ಕ್ಯಾಟ್ ವಾಕ್ ಮಾಡಿದ್ದು ಏಕೆ ಗೊತ್ತಾ?

ಅಮೆರಿಕದ ಬಿಕಿನಿ ಮಾಡೆಲ್ ಮಾರಾ ಮಾರ್ಟಿನ್ ಅವರು ತಮ್ಮ ಐದು ತಿಂಗಳ ಮಗುವಿಗೆ ಎದೆಹಾಲು ಉಣಿಸುತ್ತಲೇ...
ಮಾಡೆಲ್ ಮಾರಾ ಮಾರ್ಟಿನ್
ಮಾಡೆಲ್ ಮಾರಾ ಮಾರ್ಟಿನ್
Updated on
ಫ್ಲೋರಿಡಾ: ಅಮೆರಿಕದ ಬಿಕಿನಿ ಮಾಡೆಲ್ ಮಾರಾ ಮಾರ್ಟಿನ್ ಅವರು ತಮ್ಮ ಐದು ತಿಂಗಳ ಮಗುವಿಗೆ ಎದೆಹಾಲು ಉಣಿಸುತ್ತಲೇ ರ್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡಿರುವುದು ಈಗ ಸಾಮಾಜಿಕ ತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಾರಾ, ಸಾರ್ವಜನಿಕರ ಸಕಾರಾತ್ಮಕ ಪ್ರತಿಕ್ರಿಯೆಗೆ ಧನ್ಯವಾದ. ಸಾಮಾನ್ಯವಾಗಿ ಎಂದಿನಂತೆ ನನ್ನ ಮಗಳಿಗೆ ಹಾಲುಣಿಸಿದೆ. ಅವಳು ಸ್ವಲ್ಪ ಹಸಿದಿದ್ದಳು. ಮಹಿಳೆಯರು ಎಲ್ಲೇ ಆಗಲಿ ಈ ರೀತಿ ಆರಾಮವಾಗಿ ಮಗುವಿಗೆ ಹಾಲುಣಿಸಬಹುದು. ನನ್ನ ಈ ಸಣ್ಣ ನಡವಳಿಕೆ ಇಷ್ಟೊಂದು ಪ್ರಸಿದ್ಧಿಯಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಮಹಿಳೆಯರು ಎಲ್ಲಾ ಸ್ಥಳಗಳಲ್ಲೂ ಹಾಲುಣಿಸುವಂತಾಗಬೇಕು. ಆದರೆ ಅದು ಚರ್ಚೆಯ ವಿಷಯ ಆಗಬಾರದು ಎಂದು ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಇದು ಜಗತ್ತಿನಲ್ಲೇ ಅದ್ಭುತವಾದ ಎದೆಹಾಲುಣಿಸುವಿಕೆ. ನಿನಗೆ ಒಳ್ಳೆಯದಾಗಲಿ. ಇದು ಒಳ್ಳೆಯ ಹಾಗೂ ಸ್ಫೂರ್ತಿದಾಯಕ ಕೆಲಸ. ನಿನ್ನ ಕಾರ್ಯವನ್ನು ಮುಂದುವರೆಸು ಎಂದು ಕೆನಡಾದ ಲೋಟಸ್ ಮೆಟರ್ನಿಟಿ ಸಂಸ್ಥೆ ಕೊಂಡಾಡಿದೆ.
ಕಳೆದ ಭಾನುವಾರ ಫ್ಲೋರಿಡಾದ ಮಿಯಾಮಿಯಲ್ಲಿ ನಡೆದ ಈಜು ಉಡುಗೆ ಪ್ರದರ್ಶನದಲ್ಲಿ ಮಾಡೆಲ್ ಮಾರಾ ತಮ್ಮ ಮಗಳು ಅರಿಯಾಳನ್ನು ಎದೆಗೆ ಅವುಚಿಕೊಂಡು ಹಾಲುಣಿಸುತ್ತಲೇ ಹೆಜ್ಜೆ ಹಾಕಿದ್ದರು.
ಶಬ್ದ ಕೇಳಿಸಬಾರದು ಎಂಬ ಕಾರಣಕ್ಕೆ ಮಗುವಿನ ಕಿವಿಗೆ ಹೆಡ್ ಫೋನ್ ಹಾಕಿದ್ದ ಮಾರಾ, ಬಂಗಾರ ಬಣ್ಣದ ಈಜುಡುಗೆಯಲ್ಲಿ ಮಿಂಚಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com