ಪೋಷಕರಿಗೆ ಡ್ರಗ್ಸ್ ಗಿಂತ ಸಾಮಾಜಿಕ ಮಾಧ್ಯಮಗಳದ್ದೇ ಆತಂಕ: ಸಮೀಕ್ಷೆ

ತಂತ್ರಜ್ಞಾನ ಅಬಿವೃದ್ಧಿ ಹೊಂದುತ್ತಿದ್ದಂತೆ ಅದು ಮಕ್ಕಳ ಮೇಲೆ ಅನೇಕ ದುಷ್ಪರಿಣಾಮಗಳನ್ನುಂಟುಮಾಡುತ್ತದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್ ಡಿ.ಸಿ: ತಂತ್ರಜ್ಞಾನ ಅಬಿವೃದ್ಧಿ ಹೊಂದುತ್ತಿದ್ದಂತೆ ಅದು ಮಕ್ಕಳ ಮೇಲೆ ಅನೇಕ ದುಷ್ಪರಿಣಾಮಗಳನ್ನುಂಟುಮಾಡುತ್ತದೆ ಎಂಬ ಕೂಗು ಕೇಳಿಬರುತ್ತಲೇ ಇರುತ್ತದೆ. ಇದೀಗ ಸಾಮಾಜಿಕ ಮಾಧ್ಯಮಗಳು ತಮ್ಮ ಮಕ್ಕಳ ಮೇಲೆ ಡ್ರಗ್ಸ್, ಆಲ್ಕೋಹಾಲ್, ಸಿಗರೇಟು ಸೇವನೆಯಂತಹ ದುಷ್ಚಟಗಳಿಂದಲೂ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಪೋಷಕರು ಆತಂಕಕ್ಕೊಳಗಾಗಿದ್ದಾರಂತೆ.

ವಾಷಿಂಗ್ಟನ್ ನ ರೀಚೌಟ್ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆ ಪ್ರಕಾರ, ಇಂಟರ್ನೆಟ್ ಗಳು ಯುವಜನತೆ ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ತಮ್ಮ ಮಕ್ಕಳು ಆಲ್ಕೋಹಾಲ್, ಡ್ರಗ್ಸ್ ಮತ್ತು ಧೂಮಪಾನಗಳಿಗಿಂತ ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದ್ದಾರೆ ಎಂದು ಆಸ್ಟ್ರೇಲಿಯಾದ ಪೋಷಕರು ಗಾಬರಿಗೊಂಡಿದ್ದಾರೆ.

ವ್ಯತಿರಿಕ್ತವೆಂದರೆ ತಂತ್ರಜ್ಞಾನ ಶೇಕಡಾ 42ರ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದೆ. ಆದರೆ ತಂತ್ರಜ್ಞಾನ, ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ಆತಂಕಕ್ಕೀಡಾದ ಪೋಷಕರ ಸಂಖ್ಯೆ ಶೇಕಡಾ 25ರಷ್ಟಿದೆ.

ರೀಚ್ ಔಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೊನೊ ನಿಕೊಲಸ್, ಪ್ರತಿದಿನ ತಮ್ಮ ಮಕ್ಕಳು ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸುವುದು ಪೋಷಕರನ್ನು ಆತಂಕಕ್ಕೀಡುಮಾಡಿದೆಯೆಂದು ಸಮೀಕ್ಷೆ ಹೇಳುತ್ತದೆ ಎನ್ನುತ್ತಾರೆ ಎಂದು ಎಬಿಸಿ ಉಲ್ಲೇಖಿಸಿದೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ರೀಚೌಟ್ ಸಂಸ್ಥೆ 890 ಪೋಷಕರನ್ನು ಸಮೀಕ್ಷೆಗೊಳಪಡಿಸಿತ್ತು. ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಪಟ್ಟ ಅನಾಮಧೇಯತೆ ಪೋಷಕರನ್ನು ಹೆಚ್ಚು ಆತಂಕಕ್ಕೀಡುಮಾಡಿದೆಯಂತೆ. ಸಾಮಾಜಿಕ ಮಾಧ್ಯಮವೆಂದರೆ ಯುವಜನತೆ ಪ್ರತಿದಿನ ಬಳಸುವ ತಂತ್ರಜ್ಞಾನವಾಗಿದೆ. ಇಲ್ಲಿ ಗೊತ್ತಿದ್ದೊ, ಗೊತ್ತಿಲ್ಲದೆಯೊ ಯುವಜನರು ಬಹಳ ಬೇಗನೆ ಆಕರ್ಷಿತರಾಗುತ್ತಾರೆ. ಇಲ್ಲಿ ಸೋಷಿಯಲ್ ಮೀಡಿಯಾ ಮನಸ್ಸಿನ ಮೇಲೆ ಉಂಟುಮಾಡುವ ಹಾನಿ ನಿಜಕ್ಕೂ ಮಹತ್ವದ್ದು ಎನ್ನುತ್ತಾರೆ.

ಸಾಮಾಜಿಕ ಮಾಧ್ಯಮಗಳ ಭರಾಟೆಯ ಮಧ್ಯೆ ಮಕ್ಕಳ ಶಿಕ್ಷಣ ಮತ್ತು ಓದಿನ ಒತ್ತಡದ ಬಗ್ಗೆ ಕೂಡ ಪೋಷಕರಿಗೆ ಆತಂಕವುಂಟಾಗಿದೆ ಎಂದು ಸಮೀಕ್ಷೆ ಹೇಳುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com