ಸಾಂಕ್ರಾಮಿಕ ರೋಗ ಸಮಯದಲ್ಲಿ ಋತುಚಕ್ರ ಸಮಸ್ಯೆ ಎದುರಿಸುವುದು ಹೇಗೆ...? 

ಕೊರೋನಾ ಸಾಂಕ್ರಾಮಿಕ ರೋಗ ಆರಂಭವಾಗಿ ಕಳೆದ ಒಂದೂವರೆ ವರ್ಷದಿಂದ ಸಾಕಷ್ಟು ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಋತುಚಕ್ರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮಹಿಳೆಯರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆಗಳು ಹೆಚ್ಚಾಗುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕೊರೋನಾ ಸಾಂಕ್ರಾಮಿಕ ರೋಗ ಆರಂಭವಾಗಿ ಕಳೆದ ಒಂದೂವರೆ ವರ್ಷದಿಂದ ಸಾಕಷ್ಟು ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಋತುಚಕ್ರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮಹಿಳೆಯರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆಗಳು ಹೆಚ್ಚಾಗುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ. ಅನಿಯಮಿತ ಋತುಸ್ರಾವ, ಅಧಿಕ ರಕ್ತಸ್ರಾವ, ಅನಿಯಂತ್ರಿತ ರಕ್ತಸ್ರಾವ ಸಮಸ್ಯೆಗಳು ಕಂಡುಬರುತ್ತಿವೆ. 

ಈ ಸಾಂಕ್ರಾಮಿಕ ರೋಗ ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳ ಮೇಲೂ ಪರಿಣಾಮ ಬೀರುತ್ತಿದೆ. ಇದರ ಪರಿಣಾಮ ಮಹಿಳೆಯರು ಆತಂಕ, ಆಯಾಸ, ಇದ್ದಕ್ಕಿದ್ದಂತೆ ಆಲೋಚನೆಗಳು ಬದಲಾಗುವುದು, ಖಿನ್ನತೆ ಸಮಸ್ಯೆಗಳಿಂದ ಬಳಲುವಂತಾಗಿದೆ. 

ವರ್ಕ್ ಫ್ರಮ್ ಹೋಮ್ ನಿಂದ ಎದುರಾಗತ್ತಿರುವ ಒತ್ತಡ, ದೈಹಿಕ ಚಟುವಟಿಕೆಗಳ ಕೊರತೆ, ಆಹಾರ ಪದ್ಧತಿ, ಜೀವನ ಶೈಲಿಯಲ್ಲಿ ಬದಲಾವಣೆಗಳಿಂದಾಗಿ ಅನಿಯಮಿತ ಮುಟ್ಟಿನ ಸಮಸ್ಯೆಗಳು ಎದುರಾಗುತ್ತಿವೆ. 

ಮಹಿಳೆಯರಷ್ಟೇ ಅಲ್ಲದೆ, ಪುಟ್ಟ ಹೆಣ್ಣು ಮಕ್ಕಳ ಮೇಲೂ ಕೊರೋನಾ ಪರಿಣಾಮ ಬೀರಿದೆ. ಆನ್ ಲೈನ್ ಕ್ಲಾಸ್ ಗಳಿಂದ ಎದುರಾಗುತ್ತಿರುವ ಒತ್ತಡ, ಲಾಕ್ಡೌನ್ ಹಿನ್ನೆಲೆಯಲ್ಲಿ ಹೊರಗೆ ಆಟವಾಡಲು ಸಾಧ್ಯವಾಗದಿರುವುದು, ದೈಹಿಕ ಚಟುವಟಿಕೆಗಳಿಲ್ಲದೆ ತೂಕ ಏರಿಕೆಯಾಗಿರುವುದರಿಂದ ಮಕ್ಕಳೂ ಕೂಡ ಸಮಸ್ಯೆ ಎದುರಿಸುವಂತಾಗಿದೆ. ಈ ನಡುವೆ ಋತುಚಕ್ರ ಸಮಸ್ಯೆಗಳು ಕಾಣಿಸಿಕೊಂಡರೂ ಕೂಡ ಕೋವಿಡ್ ಆತಂಕದಿಂದ ಸಾಕಷ್ಟು ಜನರು ಆಸ್ಪತ್ರೆಗಳಿಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದು ಸಮಸ್ಯೆ ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತಿದೆ. 

ಇಂತಹ ಸಂದರ್ಭದಲ್ಲಿ ಮುಟ್ಟಿನ ಸಮಸ್ಯೆಗಳಿಂದ ದೂರ ಇರಲು ಕೆಲ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.

ಹಾಗಾದರೆ ಆ ಆರೋಗ್ಯಕರ ಬದಲಾವಣೆಗಳಾದರೂ ಯಾವುದು... ಋತುಚಕ್ರದಿಂದ ಎದುರಾಗುವ ಸಮಸ್ಯೆಗಳಿಂದ ದೂರ ಇರುವುದಾದರೂ ಹೇಗೆ? ಇಲ್ಲಿದೆ ಮಾಹಿತಿ...

  • ಒತ್ತಡದಿಂದ ದೂರ ಇರಲು ಧ್ಯಾನ ಮಾಡಿ. 
  • ದಿನನಿತ್ಯ ಯೋಗ, ಝುಂಬಾ, ನೃತ್ಯಗಳನ್ನು ಮಾಡಿ. 
  • ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಿರಿ. ಮನೆಯ ಕೆಲಸಗಳಲ್ಲಿ ಕೈಜೋಡಿಸಿ. 
  • ಸೂಕ್ತ ಸಮಯಕ್ಕೆ ಲಸಿಕೆಗಳನ್ನು ಪಡೆದುಕೊಳ್ಳಿ. 

ಯಾವಾಗ ವೈದ್ಯರ ಸಲಹೆ ಪಡೆದುಕೊಳ್ಳಬೇಕು...? 

  • ಅತೀವ್ರ ರಕ್ತಸ್ರಾವವಾಗುತ್ತಿದ್ದರೆ...
  • ಮುಟ್ಟಿನ ಸಮಯದಲ್ಲಿ ಅಥವಾ ಮುಟ್ಟಿಗಿಂತಲೂ ಮೊದಲು ಅತೀವ್ರ ದಣಿವು, ಆಯಾಸ ವಾಗುತ್ತಿದ್ದರೆ...
  • ಸಂಭೋಗದ ನಂತರ ರಕ್ತಸ್ರಾವವಾಗುತ್ತಿದ್ದರೆ...
  • ಅನಗತ್ಯ ಗರ್ಭಧಾರಣೆ ಸಂದರ್ಭದಲ್ಲಿ...
  • ಸ್ತನಗಳಲ್ಲಿ ಗಡ್ಡೆಗಳು ಕಾಣಿಸಿಕೊಂಡ ಕೂಡಲೇ ಸ್ತ್ರೀರೋಗ ತಜ್ಞರನ್ನು ಕೂಡಲೇ ಸಂಪರ್ಕಿಸಬೇಕಾಗುತ್ತದೆ. 
  • ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಕೆಲ ವೈದ್ಯರು ನೇರ ಭೇಟಿಗೆ ಅನುಮತಿ ನೀಡದಿರಬಹುದು. ಆದರೆ, ಈ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರದೆ ವೈದ್ಯರನ್ನು ಆನ್'ಲೈನ್ ಮೂಲಕವಾದರೂ ಸಂಪರ್ಕಿಸಿ ಸಲಹೆಗಳನ್ನು ಪಡೆದುಕೊಳ್ಳುವುದು ಬಹುಮುಖ್ಯವಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com