ಚಪಾತಿಯನ್ನ ಹೂವಿನಂತೆ ಸಾಫ್ಟ್ ಆಗಿ ಮಾಡಬೇಕಾ? ಇಲ್ಲಿದೆ ಸಿಂಪಲ್ ಕಿಚನ್ ಹಾಕ್ಸ್; ದಿನವಿಡೀ ಸಾಫ್ಟ್ ಆಗಿರೋದು ಪಕ್ಕಾ!

ಬಿಸಿಬಿಸಿಯಾದ ಚಪಾತಿಯನ್ನು ತಟ್ಟೆಗೆ ಹಾಕಿದಾಗ ಹೂವಿನಂತೆ ಮೃದುವಾಗಿ ಬಾಯಲ್ಲಿ ಕರಗುವಂತಿರಬೇಕು. ಆದರೆ ಎಷ್ಟೇ ಪ್ರಯತ್ನಿಸಿದರೂ ಹಲವರ ಮನೆಯಲ್ಲಿ ಚಪಾತಿ ಮಾಡಿದ ಕೆಲವೇ ನಿಮಿಷಗಳಲ್ಲಿ ರಬ್ಬರ್‌ನಂತೆ ಗಟ್ಟಿಯಾಗಿ ಬಿಡುತ್ತದೆ. ಹಾಗಾಗಿ, ಈ ಸಿಂಪಲ್ ಟ್ರಿಕ್ಸ್ ಮೂಲಕ ದಿನವಿಡೀ ಸಾಫ್ಟ್ ಆಗಿರೋದು ಪಕ್ಕಾ!
Chapati
ಚಪಾತಿ
Updated on

Kitchen Hacks: ಬಿಸಿಬಿಸಿಯಾದ ಚಪಾತಿಯನ್ನು ತಟ್ಟೆಗೆ ಹಾಕಿದಾಗ ಅದು ಹೂವಿನಂತೆ ಮೃದುವಾಗಿ ಬಾಯಲ್ಲಿ ಕರಗುವಂತಿರಬೇಕು ಎಂಬುದು ಎಲ್ಲರ ಆಸೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಹಲವರ ಮನೆಯಲ್ಲಿ ಚಪಾತಿ ಮಾಡಿದ ಕೆಲವೇ ನಿಮಿಷಗಳಲ್ಲಿ ರಬ್ಬರ್‌ನಂತೆ ಗಟ್ಟಿಯಾಗಿ ಬಿಡುತ್ತದೆ. ಲಂಚ್ ಬಾಕ್ಸ್‌ಗೆ ತೆಗೆದುಕೊಂಡು ಹೋಗುವ ಹೊತ್ತಿಗೆ ಹಪ್ಪಳದಂತಾಗುವ ಚಪಾತಿಗೆ ಈ ಸಿಂಪಲ್ ಟ್ರಿಕ್ಸ್ ಮೂಲಕ ಹೇಳಿ ಗುಡ್ ಬೈ! ಹಾಗಾದ್ರೆ, ಅದೇನು ಗೊತ್ತಾ ಅಡುಗೆಮನೆ ರಹಸ್ಯ?

ನೀರು ಅಥವಾ ಹಾಲು

ಚಪಾತಿ ಹಿಟ್ಟು ಕಲಸುವಾಗ ತಣ್ಣೀರಿನ ಬದಲು ಉಗುರುಬೆಚ್ಚಗಿನ ನೀರು ಅಥವಾ ಸ್ವಲ್ಪ ಬೆಚ್ಚಗಿನ ಹಾಲನ್ನು ಬಳಸುವುದು ಒಳ್ಳೆಯದು. ಯಾಕಂದ್ರೆ, ಬೆಚ್ಚಗಿನ ನೀರು ಗೋಧಿ ಹಿಟ್ಟಿನಲ್ಲಿರುವ ಗ್ಲುಟನ್ ಅನ್ನು ಸರಿಯಾಗಿ ಸಕ್ರಿಯಗೊಳಿಸಿ ಹಿಟ್ಟು ನಯವಾಗುವಂತೆ ಮಾಡುತ್ತದೆ. ಇದರಿಂದ ಹಿಟ್ಟು ಹೆಚ್ಚು ತೇವಾಂಶವನ್ನು ಹೀರಿಕೊಂಡು ಚಪಾತಿ ಹೆಚ್ಚು ಹೊತ್ತು ಮೃದುವಾಗಿರಲು ಸಹಕಾರಿಯಾಗುತ್ತದೆ.

ಹಿಟ್ಟಿನ ಮೇಲೆ ಎಣ್ಣೆ ಹಾಕಿ

ಹಿಟ್ಟನ್ನು ಬರೀ ಬೆರೆಸಿದರೆ ಸಾಲದು, ಕನಿಷ್ಠ 5ರಿಂದ 7 ನಿಮಿಷಗಳ ಕಾಲ ಮೆತ್ತಗೆ ಹದವಾಗಿ ಹದಗೊಳಿಸುವುದು. ಹಿಟ್ಟನ್ನು ಹದವಾದಷ್ಟು ಚಪಾತಿ ಮೃದುವಾಗಿ ಬರುತ್ತದೆ. ಕಲಸಿದ ನಂತರ ಹಿಟ್ಟಿನ ಮೇಲ್ಭಾಗಕ್ಕೆ ಒಂದು ಚಮಚ ಎಣ್ಣೆ ಅಥವಾ ತುಪ್ಪವನ್ನು ಸವರಿ, ತೇವಾಂಶ ಆವಿಯಾಗದಂತೆ ಮುಚ್ಚಿಡಬೇಕು.

Chapati
ಅಡುಗೆ ಮಾಡುವಾಗ ಎಣ್ಣೆ ಸಿಡಿಯುತ್ತಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಾಕು!

ಇದರೊಂದಿಗೆ, ಹಿಟ್ಟು ಕಲಸಿದ ತಕ್ಷಣ ಚಪಾತಿ ಲಟ್ಟಿಸಲು ಹೋಗಬಾರದು. ಕಲಸಿದ ಹಿಟ್ಟನ್ನು ಒದ್ದೆಯಾದ ಶುದ್ಧ ಬಟ್ಟೆಯಿಂದ ಮುಚ್ಚಿ ಕನಿಷ್ಠ 15ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ಈ ಸಮಯದಲ್ಲಿ ಹಿಟ್ಟು ಸರಿಯಾಗಿ ಹದಗೊಂಡು, ಜಿಗುಟುತನ ಚೆನ್ನಾಗಿ ಬಂದು ಚಪಾತಿ ಮೃದುವಾಗುತ್ತದೆ.

ಬೇಯಿಸುವ ಸರಿಯಾದ ವಿಧಾನ

ಚಪಾತಿ ಲಟ್ಟಿಸುವಾಗ ಅತಿಯಾಗಿ ಒಣಹಿಟ್ಟು ಬಳಸಬಾರದು. ಹೆಚ್ಚು ಒಣಹಿಟ್ಟು ಬಳಸಿದರೆ ಬೇಯಿಸುವಾಗ ಚಪಾತಿ ಗಟ್ಟಿಯಾಗುತ್ತದೆ. ಹಂಚನ್ನು ಚೆನ್ನಾಗಿ ಕಾಯಿಸಿಕೊಂಡು ಮಧ್ಯಮ ಅಥವಾ ದೊಡ್ಡ ಉರಿಯಲ್ಲಿ ಚಪಾತಿಯನ್ನು ಎರಡು ಬದಿಗಳಲ್ಲಿ ಬಣ್ಣ ಬರುವವರೆಗೆ ಬೇಯಿಸಿ. ಕಡಿಮೆ ಉರಿಯಲ್ಲಿ ಹೆಚ್ಚು ಹೊತ್ತು ಬೇಯಿಸಿದರೆ ಚಪಾತಿಯಲ್ಲಿರುವ ತೇವಾಂಶ ಪೂರ್ಣವಾಗಿ ಒಣಗಿ ಗಟ್ಟಿಯಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com