ದೇಶ

ವಾಲ್‌ಮಾರ್ಟ್‌ನಿಂದ ಮತ್ತೆ ಲಾಬಿ

ವಾಲ್‌ಮಾರ್ಟ್ ಸಂಸ್ಥೆಯು ಭಾರತದೊಳಗೆ ಕಾಲಿಡಲು ಪ್ರಯತ್ನ ಮುಂದುವರಿಸಿದೆ.

ವಾಲ್‌ಮಾರ್ಟ್‌ನಿಂದ ಮತ್ತೆ ಲಾಬಿ
Published On :

ವಾಷಿಂಗ್ಟನ್: ರಿಟೇಲ್ ಮಾರುಕಟ್ಟೆಯ ದಿಗ್ಗಜ ವಾಲ್‌ಮಾರ್ಟ್ ಸಂಸ್ಥೆಯು ಭಾರತದೊಳಗೆ ಕಾಲಿಡಲು ಶತಾಯಗತಾಯ ಪ್ರಯತ್ನ ಮುಂದುವರಿಸಿದೆ. ಭಾರತೀಯ ಮಾರುಕಟ್ಟೆಗೆ ಕಾಲಿಡುವ ಸಂಬಂಧ ಸೆನೆಟ್ ಸದಸ್ಯರಿಗೆ ನೀಡಲು ಸಂಸ್ಥೆ ಮತ್ತೆ 33 ಕೋಟಿ ವೆಚ್ಚ ಮಾಡಿದೆ ಎಂದು ನೂತನ ವರದಿ ತಿಳಿಸಿದೆ.
ವಾಲ್‌ಮಾರ್ಟ್ ಲಾಬಿಗೆ ಸಂಬಂಧಿಸಿ ಭಾರತ ಸರ್ಕಾರ ಇತ್ತೀಚೆಗಷ್ಟೇ ತನಿಖೆ ಆರಂಭಿಸಿತ್ತು. ಇದರ ಬೆನ್ನಲ್ಲೇ ರಿಟೇಲ್ ಮಾರುಕಟ್ಟೆಯ ದಿಗ್ಗಜ ಮತ್ತೆ ಈ ವಿಚಾರವಾಗಿ ಲಾಬಿ ಶುರುಮಾಡಿದೆ. ವರದಿ ಪ್ರಕಾರ, ಡಿಸೆಂಬರ್‌ನಲ್ಲಿ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಎಫ್‌ಡಿಐ ಕುರಿತು ಭಾರತದಲ್ಲಿ ಚರ್ಚೆ ನಡೆಸುವುದು ಸೇರಿ ವಿವಿಧ ವಿಚಾರಗಳಿಗಾಗಿ ವಾಲ್‌ಮಾರ್ಟ್ 8 ಕೋಟಿ ವೆಚ್ಚ ಮಾಡಿದೆ. ಇದರಿಂದಾಗಿ ಕಂಪನಿ 2012ರ ಅವಧಿಗೆ ಭಾರತ ಪ್ರವೇಶಕ್ಕಾಗಿ ಮಾಡಿದ ಲಾಬಿ ವೆಚ್ಚ 33 ಕೋಟಿ ತಲುಪಿದೆ. ವಾಲ್‌ಮಾರ್ಟ್ ಲಾಬಿಗೆ ಸಂಬಂಧಿಸಿ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಈ ಕುರಿತು ತನಿಖೆಗೆ ಆದೇಶ ನೀಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.