ಗಾಜಿನ ಮೊಬೈಲ್ ಮಾಯೆ!

ಲಂಡನ್: ಇದೇನು ಮೊಬೈಲೇ ಅಥವಾ ಗಾಜಿನ ತುಂಡೇ? ಸಂಪೂರ್ಣ ಪಾರದರ್ಶಕತೆ ಅಂದ್ರೆ ಇದೇನಾ..?
ನಿಮ್ಮ ಈ ಪ್ರಶ್ನೆಗಳಿಗೆ ಇದೇ ವರ್ಷಾಂತ್ಯದಲ್ಲಿ ಉತ್ತರ ದೊರೆಯಲಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಬೆಳವಣಿಗೆ ತರಲು ಮುಂದಾಗಿರುವ ತೈವಾನ್ನ ಕಂಪನಿಯೊಂದು 2013ರ ಅಂತ್ಯದೊಳಗೆ ಪಾರದರ್ಶಕ ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.
ಗಾಜಿನ ಮೋಜು: ವಿವಿಧ ವಿನ್ಯಾಸಗಳ, ಹೊಸ ಹೊಸ ತಂತ್ರಜ್ಞಾನಗಳ ಸ್ಮಾರ್ಟ್ಫೋನ್ಗಳನ್ನು ಬಳಸಿರುವ ಯುವಜನತೆ ಇನ್ನು ಗಾಜಿನ ಮೋಜನ್ನು ಅನುಭವಿಸಲಿದ್ದಾರೆ. 'ಸ್ವಿಚೇಬಲ್ ಗ್ಲಾಸ್' ತಂತ್ರಜ್ಞಾನ ಬಳಸಿ ಈ ಪಾರದರ್ಶಕ ಫೋನ್ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ನೋಡಲು ಗಾಜಿನಂತೆಯೇ ಇದ್ದು, ಲಿಕ್ವಿಡ್ ಕ್ರಿಸ್ಟಲ್ ಅಣುವನ್ನು ಬಳಸಿ ಓಎಲ್ಇಡಿ ಮೂಲಕ ಇದರಲ್ಲಿ ಚಿತ್ರಗಳು ಡಿಸ್ಪ್ಲೇ ಆಗಲಿವೆ.
ಫೋನ್ ಆಫ್ ಆಗಿದ್ದಾಗ, ಎಲ್ಲ ಅಣುಗಳೂ ಸಾಲಾಗಿ ಜೋಡಣೆಗೊಂಡು ಮೃದು ಸಂಯೋಜನೆಯನ್ನು ರೂಪಿಸುತ್ತದೆ. ಸ್ವಿಚ್ ಆನ್ ಆದೊಡನೆ ಮತ್ತೆ ಹಿಂದಿನ ರೂಪಕ್ಕೆ ಬಂದು ಟೆಕ್ಸ್ಟ್, ಐಕಾನ್, ಇತರ ಚಿತ್ರಗಳನ್ನು ತೋರಿಸುತ್ತವೆ. ಪಾರದರ್ಶಕ ವಯರ್ ಮೂಲಕವೇ ಮೊಬೈಲ್ ಚಾರ್ಜ್ ಆಗುತ್ತದೆ.
ಕಣ್ಣಿಗೆ ಕಾಣುವಂಥದ್ದು: ಇಲ್ಲಿ ಎಸ್ಡಿ ಕಾರ್ಡ್, ಸಿಮ್ ಕಾರ್ಡ್, ಮೈಕ್ರೋಫೋನ್, ಬ್ಯಾಟರಿ, ಕ್ಯಾಮೆರಾ ಪಾರದರ್ಶಕವಾಗಿರುವುದಿಲ್ಲ. ಇವುಗಳು ಕಣ್ಣಿಗೆ ಕಾಣುತ್ತಿರುತ್ತವೆ. ಆದರೆ, ಮೊಬೈಲ್ ಉತ್ಪಾದನೆ ಸಮಯದಲ್ಲಿ ಇವುಗಳೆಲ್ಲವನ್ನು ಕಡು ಗ್ಲಾಸಿನ ಕವರ್ನೊಳಗೆ ಅಳವಡಿಸಲಾಗುತ್ತದೆ. ಮೊಬೈಲ್ಗಾಗಿ ಅತ್ಯಂತ ಚಿಕ್ಕ ಲೀಥಿಯಂ ಅಯನ್ ಬ್ಯಾಟರಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕಂಪನಿಯ ಪ್ರಧಾನ ವ್ಯವಸ್ಥಾಪಕ ಸ್ಯಾಮ್ ಯು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


