ಬೇಣಿ ವಿರುದ್ಧ ಮೃದುವಾದ ಮುಲಾಯಂ
ಕೇಂದ್ರ ಸಚಿವ ಬೇಣಿ ಪ್ರಸಾದ್ ವರ್ಮಾ ಅವರ ರಾಜಿನಾಮೆಗೆ ಒತ್ತಾಯಿಸಿದ್ದ ಎಸ್ಪಿ ನಾಯಕ...

ನವದೆಹಲಿ: ಕೇಂದ್ರ ಸಚಿವ ಬೇಣಿ ಪ್ರಸಾದ್ ವರ್ಮಾ ಅವರ ರಾಜಿನಾಮೆಗೆ ಒತ್ತಾಯಿಸಿದ್ದ ಎಸ್ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಕೊಂಚ ಮೃದುವಾಗಿದ್ದಾರೆ. ಅಲ್ಲದೆ ಯುಪಿಎಗೆ ಬೆಂಬಲ ನೀಡುವ ವಿಚಾರದಲ್ಲಿ ಮುಲಾಯಂ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಎಂದು ಪಕ್ಷದ ಸಂಸದೀಯ ಸಮಿತಿ ಸಭೆ ಹೇಳಿದೆ. ಲೋಕಸಭೆಯಲ್ಲಿ 22 ಸಂಸದರ ಬಲ ಹೊಂದಿರುವ ಎಸ್ಪಿ ಬೆಂಬಲ ಯುಪಿಎಗೆ ಬೇಕೇ ಬೇಕು. ಆದರೆ ಬೇಣಿ ಪ್ರಸಾದ್ ವರ್ಮಾ ಅವರ ಹೇಳಿಕೆಯಿಂದ ಕೋಪಗೊಂಡಿದ್ದ ಮುಲಾಯಂ ಅವರು ಪ್ರಧಾನಿ ಮತ್ತು ಸೋನಿಯಾ ಅವರ ಮಧ್ಯ ಪ್ರವೇಶದಿಂದಾಗಿ ಕೊಂಚ ಮೃದುವಾಗಿದ್ದಾರೆ. ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಪಕ್ಷ ಹೇಳಿದೆ.
ಇನ್ನೊಂದು ಮೂಲಗಳ ಪ್ರಕಾರ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಯುಪಿಎ ಹತ್ತಿರ ಬರುತ್ತಿರುವ ಸಂದರ್ಭ ಅರಿತ ಮುಲಾಯಂ ಅವರ ಎಸ್ಪಿ ಮೃದುವಾಗಿದೆ ಎನ್ನಲಾಗುತ್ತಿದೆ. ಇದರಿಂದ ಯುಪಿಎಗೆ ತನ್ನ ಬೆಂಬಲ ಬೇಕಾಗದೇ ಇರಬಹುದು, ಇಂಥ ಅವಕಾಶ ಬಿಡುವುದು ಬೇಡ ಎಂಬ ಕಾರಣದಿಂದ ಅದು ಬೆಂಬಲ ನೀಡುವ ಕುರಿತಂತೆ ಮುಲಾಯಂಗೇ ಅಧಿಕಾರ ನೀಡುವ ನಿರ್ಧಾರಕ್ಕೆ ಬಂದಿದೆ. ಸ್ವತಃ ಮುಲಾಯಂ ಅವರೇ ಪಕ್ಷದ ನಾಯಕರಿಗೆ ಈ ಬಗ್ಗೆ ಮುನ್ಸೂಚನೆ ನೀಡಿದರು ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


