

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿವಿಧೆಡೆ ಉಗ್ರರು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಸೈನಿಕರಿಗೆ ಶನಿವಾರ ಮಹತ್ವದ ದಾಖಲೆಗಳು ದೊರಕಿವೆ.
ದಾಳಿ ಬಳಿಕ ಉಗ್ರರು ತಂಗಿದ್ದ ಸ್ಥಳವನ್ನು ಪರಿಶೀಲನೆ ನಡೆಸಿದ ಭಾರತೀಯ ಸೈನಿಕರಿಗೆ ಸ್ಥಳದಲ್ಲಿ ಉಗ್ರರು ಬಳಸುತ್ತಿದ್ದ ಆಹಾರದ ಪೊಟ್ಟಣಗಳು, ಆರು ಎಕೆ 47 ಸೇರಿದಂತೆ 2 ಪಿಸ್ತೂಲುಗಳು ದೊರಕಿವೆ.
ಸೈನಿಕರಿಗೆ ಸಿಕ್ಕಿರುವ ಆಹಾರ ಪೊಟ್ಟಣಗಳ ಮೇಲೆ ಉರ್ದು ಅಕ್ಷರದ ಬರಹಗಳಿದ್ದು, ಸಾಮಾನ್ಯವಾಗಿ ಇಂತಹ ಪೊಟ್ಟಣಗಳನ್ನು ಪಾಕ್ ಸೈನಿಕರು ಬಳಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಭಾರತೀಯ ಸೈನಿಕರಿಗೆ ಸಿಕ್ಕಿರುವ ದಾಖಲೆಗಳ ಪ್ರಕಾರ ಉಗ್ರರ ದಾಳಿಗೆ ಪಾಕಿಸ್ತಾನವೇ ಕುಮ್ಮಕ್ಕುಕೊಟ್ಟಿರಬಹುದು ಎಂಬ ಶಂಕೆ ಮೂಡಿದೆ.
ವಿಧಾನಸಭಾ ಚುನಾವಣೆಯ ಮತದಾನವನ್ನು ಗುರಿಯಾಸಿಕೊಂಡು ನಿನ್ನೆ ಉಗ್ರರು ನಡೆಸಿದ ಗುಂಡಿನ ದಾಳಿ ಹಾಗೂ ಆತ್ಮಾಹುತಿ ದಾಳಿಗೆ ಸುಮಾರು 20 ಯೋಧರು ಸಾವನ್ನಪ್ಪಿದ್ದು ಅಲ್ಲದೆ, 11 ಮಂದಿ ಗಾಯಗೊಂಡಿದ್ದರು.