4 ತಿಂಗಳಾದರು ಕೋಮ ಸ್ಥಿತಿಯಿಂದ ಹೊರಬರದ ಜಸ್ವಂತ್ ಸಿಂಗ್

ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ಅವರು ಇನ್ನೂ ಕೋಮಾ ಸ್ಥಿತಿಯಲ್ಲಿದ್ದು...
4 ತಿಂಗಳಾದರು ಕೋಮ ಸ್ಥಿತಿಯಿಂದ ಹೊರಬರದ ಜಸ್ವಂತ್ ಸಿಂಗ್

ನವದೆಹಲಿ: ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ಅವರು ಇನ್ನೂ ಕೋಮಾ ಸ್ಥಿತಿಯಲ್ಲಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

ಕಳೆದ ನಾಲ್ಕು ತಿಂಗಳಿನಿಂದ ಕೋಮ ಸ್ಥಿತಿಯಲ್ಲಿರುವ ಜಸ್ವಂತ್ ಸಿಂಗ್ ಆರೋಗ್ಯದಲ್ಲಿ ಯಾವುದೇ ರೀತಿಯ ಚೇತರಿಕೆ ಕಂಡಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಕೃತಕ ಉಸಿರಾಟ ಸಾಧನದ ನೆರವಿನೊಂದಿಗೆ ಅವರು ಇನ್ನೂ ಕೋಮಾದಲ್ಲೇ ಇದ್ದಾರೆ.

76 ವರ್ಷದ ಜಸ್ವಂತ್ ಅವರು ಮನೆಯಲ್ಲಿ ಬಿದ್ದು, ತಲೆಗೆ ಗಾಯಗೊಂಡು ಆ.8ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮೆದುಳಿಗೆ ಬಲವಾದ ಪೆಟ್ಟು ಬಿದ್ದಿರುವ ಕಾರಣ ಅವರು ಕೋಮ ಸ್ಥಿತಿಗೆ ತಲುಪಿದ್ದಾರೆ.

ಜಸ್ವಂತ್ ಸಿಂಗ್ ಅವರ ಆರೋಗ್ಯದ ಚೇತರಿಕೆಗಾಗಿ ನುರಿತ ವೈದ್ಯರನ್ನು ಕರೆ ತಂದು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಇದರಿಂದ ಜಸ್ವಂತ್ ಸಿಂಗ್ ಆರೋಗ್ಯ ಚೇತರಿಸಿಕೊಳ್ಳುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com