ಕಪ್ಪುಹಣ ರು. 4, 479 ಕೋಟಿ

ಎಚ್‌ಎಸ್‌ಬಿಸಿ ಪಟ್ಟಿಯಲ್ಲಿರುವ ಭಾರತೀಯರ ಖಾತೆಗಳಲ್ಲಿ ರು.4, 479 ಕೋಟಿ ಕಪ್ಪುಹಣ ಇದೆ...
ಕಪ್ಪುಹಣ ರು. 4, 479 ಕೋಟಿ

ನವದೆಹಲಿ: ಎಚ್‌ಎಸ್‌ಬಿಸಿ ಪಟ್ಟಿಯಲ್ಲಿರುವ ಭಾರತೀಯರ ಖಾತೆಗಳಲ್ಲಿ ರು.4, 479 ಕೋಟಿ ಕಪ್ಪುಹಣ ಇದೆ.

ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣಕ್ಕೆ ಸಂಬಂಧಿಸಿ ಸಿಕ್ಕ ಪ್ರಮುಖ ಮಾಹಿತಿಯಿದು. ಈ ವಿಚಾರವನ್ನು ಕೇಂದ್ರ ಸರ್ಕಾರವೇ ಬಹಿರಂಗಪಡಿಸಿದ್ದು, ಅಂತಹ 79 ಖಾತೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ ಎಂದು ತಿಳಿಸಿದೆ.

ಇಷ್ಟೇ ಅಲ್ಲದೆ, ಭಾರತದಲ್ಲೇ ಇರುವ ರು.14, 957.95 ಕೋಟಿಯಷ್ಟು ಸೂಕ್ತ ಲೆಕ್ಕಪತ್ರವಿಲ್ಲದ ಆಸ್ತಿಯ ಬಗ್ಗೆಯೂ ತನಿಖೆ ಆರಂಭಿಸಲಾಗಿದೆ ಎಂದಿದೆ. ಎಚ್‌ಎಸ್‌ಬಿಸಿ ಪಟ್ಟಿಯಲ್ಲಿರುವ 628 ಭಾರತೀಯರ ಪೈಕಿ 201 ಮಂದಿ ಅನಿವಾಸಿ ಭಾರತೀಯರಾಗಿದ್ದಾರೆ ಅಥವಾ ಅವರನ್ನು ಪತ್ತೆ ಹಚ್ಚಲಾಗುತ್ತಿಲ್ಲ. ಉಳಿದ 427 ಮಂದಿ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com