

ನವದೆಹಲಿ: ಜನತಾ ಪರಿವಾರದ ನಾಯಕರ ಮಹಾ ಸಮ್ಮಿಲನಕ್ಕೆ ವೇದಿಕೆ ಸಿದ್ಧವಾಗಿದೆ. ಸೋಮವಾರ ನವದೆಹಲಿಯಲ್ಲಿ 6 ಪ್ರಮುಖ ಪಕ್ಷಗಳ 'ಮಹಾಧರಣಿ' ಕಾರ್ಯಕ್ರಮ ನಡೆಯಲಿದ್ದು, ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯಲು ನಾಯಕರು ತಯಾರಿ ನಡೆಸಿದ್ದಾರೆ.
ಜೆಡಿಯು, ಜೆಡಿಎಸ್, ಐಎನ್‌ಎಲ್‌ಡಿ, ಎಸ್‌ಜೆಪಿ, ಆರ್‌ಜೆಡಿ ಮತ್ತು ಎಸ್ಪಿಯ ಮೈತ್ರಿಗೆ ಇದು ಮೊದಲ ಹೆಜ್ಜೆ ಎಂದು ಜೆಡಿಯು ನಾಯಕ ಶರದ್ ಯಾದವ್ ತಿಳಿಸಿದ್ದಾರೆ.
ಜಂತರ್‌ಮಂಥರ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜನರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಮೋದಿ ಸರ್ಕಾರದ ವೈಫಲ್ಯ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಬೆಳಕು ಚೆಲ್ಲಲು ಜನತಾ ಪರಿವಾರದ ನಾಯಕರು ನಿರ್ಧರಿಸಿದ್ದಾರೆ.