ರೂ.145 ಕೋಟಿ ದಾಖಲೆ ಆದಾಯಗಳಿಸಿದ ಶಬರಿಮಲೆ

ಭಕ್ತರ ಹುಂಡಿ ಹಣ ರೂ.54 ಕೋಟಿ...
ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿ
ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿ
Updated on: 

ತಿರುವನಂತಪುರಂ: ಕೇರಳದ ಸುಪ್ರಸಿದ್ದ ತೀರ್ಥಕ್ಷೇತ್ರವಾಗಿರುವ ಶಬರಿಮಲೆಯಲ್ಲಿ 39 ದಿನದ ಮಂಡಲಂ ಅವಧಿಯಲ್ಲಿ ರೂ.145 ಕೋಟಿ ದಾಖಲೆಯ ಆದಾಯ ಬಂದಿದೆ.

ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತಿರುವಂಕೂರ್ ದೇವಸಂ ಮಂಡಳಿಯ ಅಧ್ಯಕ್ಷ ಎಂ.ಪಿ.ಗೋವಿಂದನ್ ನಾಯರ್, ಶಬರಿಮಲೆಯ 48 ಮಂಡಲಂ ಅವಧಿಯ 39 ದಿನಗಳಲ್ಲೇ ರೂ.141.64 ಕೋಟಿ ದಾಖಲೆಯ ಆದಾಯ ಬಂದಿದೆ ಎಂದು ಅವರು ವಿವರಿಸಿದರು. ಕಳೆದ ವರ್ಷ ಇದೇ ಅವಧಿಯಲ್ಲಿ 127.62 ಕೋಟಿ ಆದಾಯ ಬಂದಿತ್ತು. ಈ ಬಾರಿ ಮಂಡಲಂ ಅವಧಿ ಪೂರ್ಣಗೊಳ್ಳುವ ಮುನ್ನವೇ ಆದಾಯ ಪ್ರಮಾಣ ಹೆಚ್ಚಾಗಿದೆ.

ಶಬರಿ ಮಲೆ ಬರುವ ಭಕ್ತರು ಹುಂಡಿಗೆ ಹಾಕಿರುವ ಹಣವೇ ಸುಮಾರು 54 ಕೋಟಿಯಷ್ಟಾಗಿದೆ. ಕಳೆದ ವರ್ಷಕ್ಕೆ ಹುಂಡಿಯ ಹಣ ರೂ. 47ಕೋಟಿಯಾಗಿತ್ತು.

ಶಬರಿ ಮಲೆಯ ಸುಪ್ರಸಿದ್ದ ಪ್ರಸಾದವಾದ ಅಪ್ಪಂ ಮಾರಾಟದಿಂದ ಸುಮಾರು ರೂ.10ಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇದೇ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೋವಿಂದನ್, ಶಬರಿ ಮಲೆ ಅಭಿವೃದ್ಧಿಗೆ ಇನ್ನೂ 500 ಹೆಕ್ಟೇರು ಅರಣ್ಯಭೂಮಿಯ ಅಗತ್ಯವಿದೆ. ಈ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಈ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ಬರಲಿದೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com