ಮೋದಿ ಪತ್ನಿ ಜಶೋಧಾಬೇನ್‌ರ ಭದ್ರತಾ ಮಾಹಿತಿಗೆ ಆರ್‌ಟಿಐ ನಿರಾಕರಣೆ

ನನಗೆ ಭದ್ರತೆ ನೀಡುವ ಸಿಬ್ಬಂದಿ, ಸರ್ಕಾರಿ ವಾಹನಗಳಲ್ಲಿ ನನನ್ನು ಹಿಂಬಾಲಿಸುತ್ತಿದ್ದಾರೆ...
ರಧಾನಿ ನರೇಂದ್ರ ಮೋದಿ ಪತ್ನಿ ಜಶೋಧ ಬೇನ್‌
ರಧಾನಿ ನರೇಂದ್ರ ಮೋದಿ ಪತ್ನಿ ಜಶೋಧ ಬೇನ್‌
Updated on: 

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋಧ ಬೇನ್‌ಗೆ ನೀಡಿರುವ ಭದ್ರತೆ ಕುರಿತು ಆರ್.ಟಿ.ಐ ಕಾಯ್ದೆಯಡಿ ವಿವರಣೆ ನೀಡಲು ಸಾಧ್ಯವಿಲ್ಲ ಎಂದು ಪೊಲೀಸ್ ಇಲಾಖೆ, ಅವರ ಅರ್ಜಿಯನ್ನು ನಿರಾಕರಿಸಿದೆ.

ಪ್ರಧಾನಿ ಮೋದಿ ಪತ್ನಿ ಜಶೋಧ ಬೇನ್, ತನಗೆ ನೀಡಿರುವ ಭದ್ರತಾ ವಿಚಾರಗಳ ಕುರಿತು ಮಾಹಿತಿ ನೀಡುವಂತೆ ಈ ಹಿಂದೆ ಆರ್.ಟಿ.ಐಗೆ ಅರ್ಜಿ ಸಲ್ಲಿಸಿದ್ದರು.

ಅವರು ನೀಡಿದ್ದ ಪತ್ರದಲ್ಲಿ 'ನಾನು ಪ್ರಧಾನಿ ಪತ್ನಿಯಾಗಿದ್ದು, ನನಗೆ ಯಾವ ಬಗೆಯ ಸೌಲಭ್ಯಗಳನ್ನು ಒದಗಿಸಲಾಗಿದೆ. ನಾನು ಸಾರ್ವಜನಿಕ ವಾಹನಗಳನ್ನು ಬಳಸುತ್ತಿದ್ದೇನೆ. ಆದರೆ ನನಗೆ ಭದ್ರತೆ ನೀಡುವ ಸಿಬ್ಬಂದಿ, ಸರ್ಕಾರಿ ವಾಹನಗಳಲ್ಲಿ ನನನ್ನು ಹಿಂಬಾಲಿಸುತ್ತಿದ್ದಾರೆ.

ನನ್ನ ಸುತ್ತಲು ಭದ್ರತಾ ವಲಯ ರೂಪುಗೊಂಡಿದ್ದು, ಕೆಲವೊಮ್ಮೆ ಇದು ನನ್ನನ್ನು ಆತಂಕಕ್ಕೊಳಪಡಿಸುತ್ತದೆ. ಆದ್ದರಿಂದ ನನಗೆ ನೀಡಿರುವ ಭದ್ರತಾ ಕ್ರಮಗಳ ಕುರಿತು ವಿವರಣೆ ನೀಡುವಂತೆ' ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಆರ್‌ಟಿಐ ಕಾಯ್ದೆಯಡಿ ಭದ್ರತಾ ಸವಲತ್ತುಗಳ ಕುರಿತು ವಿವರಣೆ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com