ಗೋವಾ ಗಣಿ ಉದ್ಯಮಿ ರಾಧಾ ಟಿಂಬ್ಲೋಗೆ ಸಮನ್ಸ್

ರಾಧಾ ಟಿಂಬ್ಲೋ- ಸಂಗ್ರಹ ಚಿತ್ರ
ರಾಧಾ ಟಿಂಬ್ಲೋ- ಸಂಗ್ರಹ ಚಿತ್ರ
Updated on: 

ಪಣಜಿ: ಕಪ್ಪುಹಣ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಗೋವಾದ ಗಣಿ ಉದ್ಯಮಿ ರಾಧಾ ಟಿಂಬ್ಲೋ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪಟ್ಟಿಯಲ್ಲಿ ರಾಧಾ ಟಿಂಬ್ಲೋ ಹೆಸರಿರುವುದರಿಂದ ನ, 18ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಕಪ್ಪುಹಣ ಪಟ್ಟಿಯಲ್ಲಿ ಮೂವರ ಹೆಸರನ್ನು ಸರ್ಕಾರ ಬಿಡುಗಡೆ ಮಾಡಿದ್ದು ಅದರಲ್ಲಿ ರಾಧಾ ಟಿಂಬ್ಲೋ ಅವರ ಹೆಸರು ಸಹ ಇದೆ.

ಟಿಂಬ್ಲೋ ಸೇರಿದಂತೆ ಕಪ್ಪುಹಣ ಪಟ್ಟಿಯಲ್ಲಿ ಇನ್ನಿಬ್ಬರ ಹೆಸರನ್ನು ಸರ್ಕಾರ ಬಹಿರಂಗ ಪಡಿಸಿದ್ದು, ಅವರಿಬ್ಬರ ಹೆಸರು ಬಿಟ್ಟು ಟಿಂಬ್ಲೋಗೆ ಮಾತ್ರ ಸಮನ್ಸ್ ಜಾರಿ ಮಾಡಲಾಗಿದೆ.

ರಾಧಾ ಟಿಂಬ್ಲೋ ಅವರು ಗೋವಾ ಮೂಲದ ಟಿಂಬ್ಲೋ ಪ್ರೈ.ಲಿ ಗಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾರೆ. ಅಲ್ಲದೆ ಅವರ ಕುಟುಂಬದ ನಾಲ್ವರು ಸದಸ್ಯರನ್ನು ಪ್ರಮಾಣಪತ್ರದಲ್ಲಿ ಹೆಸರಿಸಲಾಗಿದೆ.

ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದ 16 ಸಂಸ್ಥೆಗಳಲ್ಲಿ ಟಿಂಬ್ಲೋ ಪ್ರೈವೇಟ್ ಲಿಮಿಟೆಡ್ ಸಹ ಒಂದಾಗಿದೆ. ಸಿಬಿಐ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಕಪ್ಪುಹಣ ಹೊಂದಿರುವವರ ಪ್ರಥಮ ಪಟ್ಟಿಯಲ್ಲಿ ಅವರ ಹೆಸರನ್ನು ನಮೂದಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com