

ಶ್ರೀನಗರ: ಮತ್ತೆ ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ, ಜಮ್ಮು ಮತ್ತು ಕಾಶ್ಮೀರದ ಬಾರಮುಲ್ಲಾ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಗುಂಡಿನ ದಾಳಿ ನಡೆಸಿದೆ.
ಯುರಿ ಸೆಕ್ಟರ್ನ ಕಮಲ್ಕೋಟ್ ಪ್ರದೇಶದಲ್ಲಿ ಗಡಿ ರೇಖೆಯನ್ನು ಉಲ್ಲಂಘಿಸಿರುವ ಪಾಕಿಸ್ತಾನ ಇಂದು ಬೆಳಿಗ್ಗೆಯಿಂದಲೇ ಆಟೋಮಷಿನ್ ಹಾಗೂ ಸಣ್ಣ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಿಕೊಂಡು ಗುಂಡಿನ ದಾಳಿ ಮಾಡಿದ್ದು, ಗುಂಡಿನ ಮೊರೆತದಿಂದಾಗಿ ಸ್ಥಳೀಯ (17) ಓರ್ವ ಬಾಲಕಿ ಸೇರಿದಂತೆ ಯೋಧನೊಬ್ಬ ಸಾವನ್ನಪ್ಪಿದ್ದಾನೆ ಎಂದು ಭಾರತೀಯ ಸೇನೆ ತಿಳಿಸಿದೆ.
ಪಾಕಿಸ್ತಾನದ ಕದನ ವಿರಾಮಕ್ಕೆ ದಿಟ್ಟ ಉತ್ತರ ನೀಡುತ್ತಿರುವ ಭಾರತೀಯ ಸೈನಿಕರು ಪ್ರತಿ ದಾಳಿ ನಡೆಸುತ್ತಿದ್ದಾರೆ.