ಆಸಿಯಾನ್-ಭಾರತ ಸಮ್ಮೇಳನ ಇಂದು

ಮೂರು ರಾಷ್ಟ್ರಗಳ 10 ದಿನಗಳ ಪ್ರವಾಸ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ...
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮ್ಯಾನ್ಮಾರ್‌ನ ಅಧ್ಯಕ್ಷ ಯು ಥೆನ್ ಸೀನ್ ಅವರು ಸ್ಮರಣಿಕೆ ನೀಡಿ ಗೌರವಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮ್ಯಾನ್ಮಾರ್‌ನ ಅಧ್ಯಕ್ಷ ಯು ಥೆನ್ ಸೀನ್ ಅವರು ಸ್ಮರಣಿಕೆ ನೀಡಿ ಗೌರವಿಸಿದರು.
Updated on: 

ನ್ಯಾ. ಪೀ ತೋ(ಮ್ಯಾನ್ಮಾರ್): ಮೂರು ರಾಷ್ಟ್ರಗಳ 10 ದಿನಗಳ ಪ್ರವಾಸ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮ್ಯಾನ್ಮಾರ್ ತಲುಪಿದ್ದಾರೆ.

ನಂತರ ನೇರವಾಗಿ ಅವರು ಮ್ಯಾನ್ಮಾರ್ ಅಧ್ಯಕ್ಷ ಯು ಥೆನ್ ಸೀನ್‌ರನ್ನು ಭೇಟಿಯಾಗಿದ್ದು, ಸುಮಾರು 45 ನಿಮಿಷಗಳ ಮಾತುಕತೆ ನಡೆಸಿದ್ದಾರೆ.

ಮಾತುಕತೆ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ, ಮ್ಯಾನ್ಮಾರ್ ಅಧ್ಯಕ್ಷರ ಜತೆಗೆ ವಿವಿಧ ವಿಚಾರಗಳ ಕುರಿತು ವಿಸ್ತೃತ ಚರ್ಚೆ ನಡೆಸಿದ್ದೇವೆ. ಸಂಸ್ಕೃತಿ, ವಾಣಿಜ್ಯ ಸಂಬಂಧ ವೃದ್ಧಿ ಮತ್ತು ಸಂಪರ್ಕ ಸುಧಾರಣೆ ಕುರಿತು ಮಾತುಕತೆ ನಡೆಸಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ.

12ನೇ ಆಸಿಯಾನ್-ಭಾರತ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ಬುಧವಾರ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ವ್ಯಾಪಾರ ಮತ್ತು ಜನ ಸಾಮಾನ್ಯರ ಜತೆಗೆ ಹೆಚ್ಚಿನ ಸಂಪರ್ಕ ಸಾಧಿಸುವ ಬಗ್ಗೆ ಹೆಚ್ಚಿನ ಒತ್ತು ನೀಡುವ ಅಂಶವನ್ನು ಪ್ರಧಾನಿ ಪ್ರಸ್ತಾಪಿಸಲಿದ್ದಾರೆ.

ನ.15ಕ್ಕೆ ಆಸ್ಟ್ರೇಲಿಯಾಗೆ ತೆರಳಲಿರುವು ಪ್ರಧಾನಿ, ನಡೆಯಲಿರುವ ಜಿ20 ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com