

ಶ್ರೀನಗರ: ಪ್ರವಾಹಕ್ಕೆ ತುತ್ತಾಗಿದ್ದ ಕಾಶ್ಮೀರದಲ್ಲಿ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಸೋನಿಯಾ ಗಾಂಧಿ ಅವರು, ಇಂದು ಉತ್ತರ ಕಾಶ್ಮೀರದ ಬಂದಿಪೊರ ಪಟ್ಟಣದಲ್ಲಿ ಮಾತನಾಡಿದರು. ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಕಾಶ್ಮೀರದ ಸಾವಿರಾರು ಜನ ನಿರ್ವಸತಿಗರಾಗಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸಿಕೊಡುವಲ್ಲಿ ಬಿಜೆಪಿ ಸೋತಿದೆ ಎಂದು ಆರೋಪಿಸಿದರು.
ಪರಿಹಾರ ಮತ್ತು ಪುನರ್ವಸತಿ ಒದಗಿಸುವುದಾಗಿ ಭರವಸೆ ನೀಡಿದ್ದ ಬಿಜೆಪಿ ಸರ್ಕಾರದ ಮಾತು ಮಾತಾಗಿಯೇ ಉಳಿದಿದೆ. ತನ್ನು ನೀಡಿದ್ದ ಮಾತನ್ನು ಉಳಿಸಿಕೊಡುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಹೇಳಿದ್ದಾರೆ.
ಕಾಶ್ಮೀರದ ಜತೆ ಕಾಂಗ್ರೆಸ್ ನೂರಾರು ವರ್ಷಗಳ ಸಂಬಂಧ ಹೊಂದಿದ್ದು ಈ ಬಾಂಧವ್ಯವೇ ನನ್ನನ್ನು ಕಾಶ್ಮೀರಕ್ಕೆ ಕರೆ ತಂದಿದೆ ಎಂದು ಸೋನಿಯಾ ಅವರು ಹೇಳಿದರು.