ದಕ್ಷಿಣ ಸಮುದ್ರ ಭಾಗದಲ್ಲಿ ಚೀನಾ ಕ್ಯಾತೆ!

ದಕ್ಷಿಣ ಸಮುದ್ರ ಭಾಗದಲ್ಲಿ ಚೀನಾ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂಬ...
ದಕ್ಷಿಣ ಸಮುದ್ರ ಭಾಗದಲ್ಲಿ ಚೀನಾ ಕ್ಯಾತೆ!
Updated on: 

ವಾಷಿಂಗ್ಟನ್: ದಕ್ಷಿಣ ಸಮುದ್ರ ಭಾಗದಲ್ಲಿ ಚೀನಾ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂಬ ಅನುಮಾನಕ್ಕೆ ಈಗ ಮತ್ತಷ್ಟು ಪುರಾವೆಗಳು ಲಭಿಸಿವೆ. ವಿವಾದಿತ ದ್ವೀಪವಾದ ಸ್ಪ್ರಾಟಿಯಲ್ಲಿ ವಾಯುನೆಲೆಯನ್ನು ಸ್ಥಾಪಿಸುತ್ತಿರುವ ಸ್ಯಾಟಲೈಟ್ ಚಿತ್ರವನ್ನು ಅಮೆರಿಕ ಬಿಡುಗಡೆ ಮಾಡಿದೆ.

ಇದು ಖನಿಜಭರಿತ ದ್ವೀಪವಾಗಿದ್ದು, ತೈವಾನ್, ಮಲೇಷ್ಯಾ, ಫಿಲಿಪೈನ್ಸ್, ವಿಯೆಟ್ನಾಂ ಮತ್ತು ಬ್ರೂನಿ ದೇಶಗಳೂ ಸಹ ಇಲ್ಲಿ ಹಕ್ಕುಸ್ವಾಮ್ಯ ಹೊಂದಲು ಪ್ರಯತ್ನಿಸುತ್ತಿರುವುದರಿಂದ ಇದು ವಿವಾದಿತ ಪ್ರದೇಶವಾಗಿದೆ.

ಆದರೆ, ಚೀನಾ ಮಾತ್ರ ಸದ್ದಿಲ್ಲದೆ ಇಲ್ಲಿ ವಾಯುನೆಲೆ ಸ್ಥಾಪಿಸುವುದರಲ್ಲಿ ನಿರತವಾಗಿದೆ ಎಂದು ಹೇಳಲಾಗುತ್ತಿದೆ. ಈ ದ್ವೀಪ ಸುಮಾರು 3000 ಮೀ. ಉದ್ದ ಹಾಗೂ 200ರಿಂದ 300ಮೀ. ಅಗಲ ವ್ಯಾಪ್ತಿಯಲ್ಲಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು, ಇದು ವಿಮಾನ ಇಳಿದಾನ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು, ಇದು ವಿಮಾನ ಇಳಿದಾನ ನಿರ್ಮಾಣ ಮಾಡಲು ಸಾಲುವಷ್ಟು ವ್ಯಾಪ್ತಿಯನ್ನು ಹೊಂದಿದೆ ಎಂಬುದು ಸ್ಟಾಟಲೈಟ್ ಚಿತ್ರದ ಮೂಲಕ ತಿಳಿಯುತ್ತಿದೆ.

ದಕ್ಷಿಣ ಸಮುದ್ರ ಭಾಗದಲ್ಲಿ ಚೀನಾದ ಈ ಚಟುವಟಿಕೆಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅಮೆರಿಕ, ಇದು ಏಷ್ಯಾ ಭಾಗದ ಭದ್ರತೆಗೆ ಸಂಬಂಧಪಟ್ಟಂತೆ ಭಾರಿ ಸಮಸ್ಯೆಯನ್ನುಂಟು ಮಾಡುತ್ತದೆ. ಇದಕ್ಕಾಗಿ ನೀತಿ ಸಂಹಿತೆಯನ್ನು ಜಾರಿಗೊಳಿಸುವ ಅವಶ್ಯಕತೆ ಇದೆ ಎಂದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com