

ನವದೆಹಲಿ: ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಪುಂಡಾಟಿಕೆಯನ್ನು ಮುಂದುವರೆಸಿದ್ದು, ಮತ್ತೆ ಭಾರತದ ಸೇನಾ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದೆ.
ಕಳೆದ ಒಂದು ವಾರದಿಂದ ಹೆಚ್ಚು ಬಾರಿ ಗಡಿ ನಿಯಮ ಉಲ್ಲಂಘನೆ ಮಾಡುತ್ತಿರುವ ಪಾಕ್ ಸೇನಾ ಪಡೆ, ಭಾನುವಾರ ಮತ್ತೆ ಭಾರತೀಯ ಸೇನಾ ಪಡೆ ಮೇಲೆ ದಾಳಿ ಮಾಡಿದೆ.
ಜಮ್ಮು ಕಾಶ್ಮೀರದ ಸಾಂಬಾ ವಲಯದಲ್ಲಿ ಗುಂಡಿನ ದಾಳಿ ನಡೆಸಿದ್ದು, ಬಿಎಸ್‌ಎಫ್ ಶಿಬಿರಗಳನ್ನು ಗುರಿಯಾಗಿಸಿಕೊಂಡು ಪಾಕ್ ಸೇನಾ ಪಡೆ ಫೈರಿಂಗ್ ಮಾಡಿದೆ. ಈ ಮೂಲಕ ಪಾಕ್ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದೆ.