ಪಕ್ಷ ಸೋಲಿಸುವ ಉದ್ದೇಶ ಇರಲಿಲ್ಲ

ದೆಹಲಿ ಸಿಎಂ ಅರವಿಂದ ಕೇಜ್ರಿನಾಲ್ ನೇತೃತ್ವದ ಎಎಪಿ ಭಿನ್ನಮತದ ಬೆಂಕಿಯಲ್ಲಿ ಬೇಯುತ್ತಿದೆ. ಅದಕ್ಕೆ ಪೂರಕವಾಗಿ ಪಕ್ಷ ಸ್ಥಾಪಕ ಸದಸ್ಯ, ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್, ಶುಕ್ರವಾರ ಕೇಜ್ರಿವಾಲ್ ಗೆ ಸವಿವರ ಬಹಿರಂಗ ಪತ್ರ ಬರೆದಿದ್ದಾರೆ...
ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್
ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್
Updated on: 

ನವದೆಹಲಿ: ದೆಹಲಿ ಸಿಎಂ ಅರವಿಂದ ಕೇಜ್ರಿನಾಲ್ ನೇತೃತ್ವದ ಎಎಪಿ ಭಿನ್ನಮತದ ಬೆಂಕಿಯಲ್ಲಿ ಬೇಯುತ್ತಿದೆ. ಅದಕ್ಕೆ ಪೂರಕವಾಗಿ ಪಕ್ಷ ಸ್ಥಾಪಕ ಸದಸ್ಯ, ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಶುಕ್ರವಾರ ಕೇಜ್ರಿವಾಲ್ ಗೆ ಸವಿವರ ಬಹಿರಂಗ ಪತ್ರ ಬರೆದಿದ್ದಾರೆ.

ದೆಹಲಿ ಸಿಎಂ ಆರೋಪಿ ಸಿದ್ಧತೆ ಚುನಾವಣೆಯಲ್ಲಿ ಪಕ್ಷ ಸೋಲಲು ತಾನು ಬಯಸಿದ್ದೆ ಎಂಬ ಆರೋಪವನ್ನು ಸರಾಸಗಟಾಗಿ ಭೂಷಣ್ ತಿರಸ್ಕರಿಸಿದ್ದಾರೆ. ಆ ರೀತಿಯ ಚಿಂತನೆ ತಮಗೆ ಇದ್ದಿದ್ದರೆ ಜನವರಿಯಲ್ಲಿಯೇ ಪಕ್ಷ ತೊರೆದು ಹೊರ ಬರುತ್ತಿದ್ದೆ ಎಂದು ತಿರುಗೇಟು ನೀಡಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಆಪ್ ಬಿಕ್ಕಟ್ಟು ಮತ್ತಷ್ಟು ಸ್ಪೋಟಗೊಳ್ಳುವ ಸಾಧ್ಯತೆಯಿದೆ.

ಪತ್ರದ ಸಾರಾಂಶ

  • ಇತ್ತೀಚೆಗೆ ಮುಕ್ತಾಯವಾದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಸದಸ್ಯರಿಗಿಂತ ಇತರ ನಾಯಕರೇ ಹೆಚ್ಚಾಗಿದ್ದರು. ಸದಸ್ಯರಾದವರಿಗೆ ಆಹ್ವಾನ ಇರಲಿ, ಇದ್ದವರಿಗೆ ಸಭೆ ನಡೆಯುವ ಸ್ಥಳಕ್ಕೆ ಪ್ರವೇಶಿಸಲೂ ಅವಕಾಶವಿರಲಿಲ್ಲ. ನನ್ನ ಮತ್ತು ಯೋಗೇಂದ್ರ ವಿರುದ್ಧ ಕ್ರಮ ಕೈಗೊಳ್ಳುವ ವೇಳೆ ಪ್ರಜಾಸತ್ತಾತ್ಮಕ ಕ್ರಮ ಅನುಸರಿಸಲಾಗಿಲ್ಲ.
  • ದೆಹಲಿ ವಿಧಾನಸಭೆ ವಿಸರ್ಜಿಸುವ ಮೊದಲು ಕಾಂಗ್ರೆಸ್ ನಾಯಕರ ಜತೆ ಸೇರಿ ಸರ್ಕಾರ ರಚಿಸುವ ಬಗ್ಗೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದರಿ. ಈ ಬಗ್ಗೆ ನೀವು ಲೆಫ್ಟಿನೆಂಟ್ ಗವರ್ನರ್ ಗೆ ರಹಸ್ಯ ಪತ್ರ ಕಳುಹಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.
  • ಕಾಂಗ್ರೆಸ್ ನಾಯಕರು ಆಪ್ ಗೆ ಬೆಂಬಲ ನೀಡುವುದಿಲ್ಲ ಎಂದಾಗ ನೀವು ಅದನ್ನು ತಪ್ಪಿಸಿಕೊಳ್ಳಲು ನಾನಾ ಪಾಡು ಪಡಬೇಕಾಯಿತು.
  • ಫೆಬ್ರವರಿಯಲ್ಲಿ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪಾರದರ್ಶಕವಾಗಿರಲಿಲ್ಲ. ಹಿಂದಿನ ಚುನಾವಣೆಯಲ್ಲಿ ಹುರಿಯಾಳುಗಳ ವಿವರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿ ಪಾರದರ್ಶಕತೆ ಮೆರೆಯಲಾಗಿತ್ತು.
  • ಕೆಲ ಅಭ್ಯರ್ಥಿಗಳು ಕಾರ್ಯಕರ್ತರನ್ನು ಥಳಿಸಿದ್ದ ಬಗ್ಗೆ, ಮದ್ಯ, ಹಣ ವಿತರಿಸುತ್ತಿದ್ದ ಬಗ್ಗೆ ದೂರುಗಳು ಬಂದಿತ್ತು. ಈ ಬಗ್ಗೆ ಆಂತರಿಕ ಲೋಕಪಾಲ ಪ್ರಬಲ ವರದಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ.
  • ಪ್ರಚಾರದ ವೇಳೆ ಪ್ರಧಾನಿ ಹುದ್ದೆಗೆ ಮೋದಿ ಎಂಬಂತೆ ದೆಹಲಿ ಸಿಎಂ ಹುದ್ದೆಗೆ ಕೇಜ್ರಿವಾಲ್ ಎಂಬ ಘೋಷ ವಾಕ್ಯವನ್ನು ರಚಿಸಲಾಯಿತು. ಇಂಥ ಘೋಷಣೆಯಿಂದ ಮೋದಿ ಎದುರು ನಾವು ಮಂಡಿಯೂರಿದಂತೆ ಎಂದು ತಿಳಿಸಿದ್ದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com