12 ಟೋಲ್ ಬೂತ್ ಮುಚ್ಚುವುದಾಗಿ ಮಹಾ ಸರ್ಕಾರ ಘೋಷಣೆ

ವಿಧಾನಸಭೆ ಚುನಾವಣೆ ವೇಳೆ ಟೋಲ್ ಮುಕ್ತ ಮಹಾರಾಷ್ಟ್ರ ಮಾಡುವುದಾಗಿ ಭರವಸೆ ನೀಡಿದ್ದ ಬಿಜೆಪಿ, ಇದೀಗ ಆ ಭರವಸೆಯನ್ನು ಈಡೇರಿಸಲು ಮುಂದಾಗಿದೆ.
ಟೋಲ್ ಬೂತ್
ಟೋಲ್ ಬೂತ್
Updated on: 

ಮುಂಬೈ: ವಿಧಾನಸಭೆ ಚುನಾವಣೆ ವೇಳೆ ಟೋಲ್ ಮುಕ್ತ ಮಹಾರಾಷ್ಟ್ರ ಮಾಡುವುದಾಗಿ ಭರವಸೆ ನೀಡಿದ್ದ ಬಿಜೆಪಿ, ಇದೀಗ ಆ ಭರವಸೆಯನ್ನು ಈಡೇರಿಸಲು ಮುಂದಾಗಿದೆ.

ರಾಜ್ಯದಲ್ಲಿನ 12 ಟೋಲ್ ಬೂತ್ಗಳನ್ನು ಮುಚ್ಚುವುದಾಗಿ ಹಾಗೂ 53 ಟೋಲ್ ಬೂತ್ಗಳಲ್ಲಿ ಲಘು ವಾಹನಗಳಿಗೆ ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಿಗೆ ಟೋಲ್ನಿಂದ ವಿನಾಯ್ತಿ ನೀಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಶುಕ್ರವಾರ ಘೋಷಿಸಿದ್ದಾರೆ.

ಈ ಕುರಿತು ಇಂದು ವಿಧಾನಸಭೆಗೆ ಮಾಹಿತಿ ನೀಡಿದ ಮಹಾ ಸಿಎಂ, ಮೇ 31ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ 53 ಟೋಲ್ ಬೂತ್ಗಳಲ್ಲಿ ಲಘು ವಾಹನಗಳಿಗೆ ಹಾಗೂ ಸರ್ಕಾರಿ ಬಸ್ಗಳಿಗೆ ಟೋಲ್ನಿಂದ ವಿನಾಯ್ತಿ ನೀಡಲಾಗುವುದು ಎಂದರು.

ಚುನಾವಣೆ ವೇಳೆ ಪಕ್ಷ ಅಧಿಕಾರಕ್ಕೆ ಟೋಲ್ ಮುಕ್ತ ಮಹಾರಾಷ್ಟ್ರ ಮಾಡುವುದು ಬಿಜೆಪಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ನಂತರ ಈ ಬಗ್ಗೆ ಉಲ್ಟಾ ಹೊಡೆದಿದ್ದ ಬಿಜೆಪಿ ಸರ್ಕಾರ, ಬಳಕಿ ಟೋಲ್ನಿಂದ ಜನತೆಗೆ ಸ್ವಲ್ಪ ರಿಲೀಫ್ ನೀಡುವುದಾಗಿ ಭರವಸೆ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com