

ರಾಯ್ ಪುರ್ : ನಿನ್ನೆ ಏಳು ಯೋಧರನ್ನು ಕೊಂದ ಬೆನ್ನಲ್ಲೇ ಇಂದು ಮತ್ತೆ ನಕ್ಸಲರು ತಮ್ಮ ಅಟ್ಟಹಾಸವನ್ನು ಮುಂದುವರೆಸಿದ್ದು, 18 ಲಾರಿಗಳಿಗೆ ಬೆಂಕಿ ಇಟ್ಟಿದ್ದಾರೆ.
ಚತ್ತೀಸ್ ಗಡದ ಕಾಂಕರ್ ಜಿಲ್ಲೆಯಲ್ಲಿ ಕಬ್ಬಿಣದ ಅದಿರು ಸಾಗಿಸುತ್ತಿದ್ದ ಲಾರಿಗಳಿಗೆ ಇಂದು ಬೆಳಿಗ್ಗೆ ಬೆಂಕಿ ಹಚ್ಚಿದ್ದಾರೆ. ಲಾರಿ ಸಮೇತ ಲಾರಿಯಲ್ಲಿದ್ದ ಕಬ್ಬಿಣದ ಅದಿರು ಬೆಂಕಿಯಲ್ಲಿ ಸುಟ್ಟು ನಾಶವಾಗಿದೆ. ಆದರೆ, ಯಾವುದೇ ಪ್ರಾಣಪಾಯದ ಬಗ್ಗೆ ವರದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ನಿನ್ನೆಯಷ್ಟೇ ನಕ್ಸಲರು ಚತ್ತೀಸ್ ಗಡ ಸುಕ್ಮಾದಲ್ಲಿ ನಕ್ಸಲರು ದಾಳಿ ನಡೆಸಿದ್ದರು. ದಾಳಿಯಲ್ಲಿ 7 ಯೋಧರು ಸಾವನ್ನಪ್ಪಿ, 11ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಘಟನೆಯಲ್ಲಿ ಮೃತಪಟ್ಟ ಯೋಧರಿಗೆ ಚತ್ತೀಸ್ ಗಡ ಮುಖ್ಯಮಂತ್ರಿ ಡಾ.ರಮಣ್ ಸಿಂಗ್ ಗೌರವ ಸಲ್ಲಿಸಿದ್ದಾರೆ.