ಡ್ಯಾನ್ಸರ್ ಸೊಂಟ ಹಿಡಿದ ರಾಜಕಾರಣಿ!

ಕಂಠಪೂರ್ತಿ ಕುಡಿದ ರಾಜಕಾರಣಿ ಒಬ್ಬ ಡ್ಯಾನ್ಸರ್ ನ ಸೊಂಟ ಹಿಡಿದು ಎಳೆದಾಡಿ ಛೀಮಾರಿ ಹಾಕಿಸಿಕೊಂಡ ಘಟನೆ ಬ್ರಿಟನ್ನಿನಲ್ಲಿ ನಡೆದಿದೆ...
ಡ್ಯಾನ್ಸರ್ ಜೊತೆ ಅಸಭ್ಯ ವರ್ತನೆ(ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ) ಮತ್ತು ಮಾಝಿದ್ ನವಾಜ್ ಶಾ ಭಾವಚಿತ್ರ
ಡ್ಯಾನ್ಸರ್ ಜೊತೆ ಅಸಭ್ಯ ವರ್ತನೆ(ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ) ಮತ್ತು ಮಾಝಿದ್ ನವಾಜ್ ಶಾ ಭಾವಚಿತ್ರ

ಲಂಡನ್: ಕಂಠಪೂರ್ತಿ ಕುಡಿದ ರಾಜಕಾರಣಿ ಒಬ್ಬ ಡ್ಯಾನ್ಸರ್ ನ ಸೊಂಟ ಹಿಡಿದು ಎಳೆದಾಡಿ ಛೀಮಾರಿ ಹಾಕಿಸಿಕೊಂಡ ಘಟನೆ ಬ್ರಿಟನ್ನಿನಲ್ಲಿ ನಡೆದಿದೆ.

ಲಿಬರಲ್ ಡೆಮಾಕ್ರಟ್ಸ್ ಪಕ್ಷದ ಸಂಸದ ಅಭ್ಯರ್ಥಿ ಮಾಝಿದ್ ನವಾಜ್ ಶಾ ಸ್ಟ್ರೈಬ್ ಕ್ಲಬ್ ನ ಪಾರ್ಟಿಯೊಂದರಲ್ಲಿ ಭಾಗವಹಿಸಿ, ಕಂಠಪೂರ್ತಿ ಮದ್ಯ ಸೇವನೆ ಮಾಡಿದ್ದರು. ಈ ವೇಳೆ ಅಲ್ಲಿ ನೃತ್ಯ ಮಾಡುತ್ತಿದ್ದ ಡ್ಯಾನ್ಸರ್ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಪ್ರಮುಖ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಡ್ಯಾನ್ಸ್ ಮಾಡುತ್ತಿದ್ದ ಯುವತಿಯನ್ನು ಸಮೀಪಕ್ಕೆ ಕರೆದ ನವಾಜ್, ಅವಳನ್ನು ತನ್ನ ಮೇಲೆ ಬೀಳುವಂತೆ ಒತ್ತಾಯಿಸಿ, ಸೊಂಟಕ್ಕೆ ಕೈ ಹಾಕಿ, ತೊಡೆಯನ್ನು ಮುಟ್ಟಲು ಯತ್ನಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನು ಗಮನಿಸಿದ ಕಾರ್ಯಕ್ರಮದ ಆಯೋಜಕರು ನವಾಜ್ ಗೆ ಎಚ್ಚರಿಸಿದ್ದಾರೆ. ಆದರೆ, ಇದನ್ನು ಲೆಕ್ಕಿಸದೆ ತನ್ನ ಅಸಭ್ಯ ವರ್ತನೆಯನ್ನು ಆತ ಮುಂದುವರೆಸಿದ ಪರಿಣಾಮ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com