18 ತಿಂಗಳ ದಲಿತ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ

18 ತಿಂಗಳ ದಲಿತ ಹೆಣ್ಣು ಮಗುವಿನ ಮೇಲೆ ನೆರೆಮನೆಯಾತ ಅತ್ಯಾಚಾರವೆಸಗಿರುವ ಘಟನೆ ಮಂಗಳವಾರ ವರದಿಯಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬದೌನ್: 18 ತಿಂಗಳ ದಲಿತ ಹೆಣ್ಣು ಮಗುವಿನ ಮೇಲೆ ನೆರೆಮನೆಯಾತ ಅತ್ಯಾಚಾರವೆಸಗಿರುವ ಘಟನೆ ಮಂಗಳವಾರ ವರದಿಯಾಗಿದೆ.

ನಿನ್ನೆ ಹೆಣ್ಣು ಮಗುವನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ನೆರೆಮನೆಯವನಾದ ಸಂಜೀವ್ ಶೋಶಿ ನಂದ ಎಂಬುವವನು ಮಗುವಿನ ಮೇಲೆ ಅತ್ಯಾಚಾರವೆಸಗಿದ್ದು, ಮತ್ತೆ ಮಗುವನ್ನು ಮನೆಗೆ ತಂದು ಬಿಟ್ಟಿದ್ದಾನೆ.

ರಾತ್ರಿಯಿಡೀ ಮಗು ನೋವಿನಿಂದ ನರಳುತ್ತಿದ್ದ ಹಿನ್ನಲೆಯಲ್ಲಿ ಪೋಷಕರು ಬೆಳಿಗ್ಗೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಮಗುವಿನ ಮೇಲೆ ಅತ್ಯಾಚಾರವಾಗಿರುವುದಾಗಿ ಹೇಳಿದ್ದಾರೆ.

ಆರೋಪಿಯನ್ನು ಬಂಧಿಸಲಾಗಿದ್ದು, ಎಫ್ ಐಆರ್ ದಾಖಲಿಸಲಾಗಿದೆ ಪೊಲೀಸ್ ಅಧಿಕಾರಿ ಸೌಮಿತ್ರ ಯಾದವ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com