

ಕೊಲ್ಕತ್ತಾ: ಕಾಂಗ್ರೆಸ್‌ನೊಂದಿಗೆ ಸಿಪಿಎಂ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವರದಿಯನ್ನು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ತಳ್ಳಿ ಹಾಕಿದ್ದಾರೆ. ಪ್ರಧಾನಿ ಮೋದಿ ಅವರ ಹಿಂದುತ್ವ ಧೋರಣೆಯ ವಿರುದ್ಧ ಎಲ್ಲ ಪಕ್ಷಗಳು ಒಂದಾಗಿ ಹೋರಾಡಲಿವೆ. ಆದರೆ ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಮ್ಮ ಪಕ್ಷಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸೈದಾಂತಿಕ ವೈರುಧ್ಯಗಳು ಇರುವುದರಿಂದ ನಾವು ಅವರ ಜತೆ ಕೈ ಜೋಡಿಸುವುದಿಲ್ಲ ಎಂದು ಹೇಳಿದ್ದಾರೆ.
ಮೋದಿ ಅವರು ಹಿಂದುತ್ವ ಧೋರಣೆಯನ್ನಿಟ್ಟುಕೊಂಡು ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಹೋರಾಡಲು ನಮಗೆ ಎಲ್ಲ ಪಕ್ಷಗಳ ಸಹಕಾರ ಬೇಕಾಗಿದೆ ಎಂದು ಎಡಪಕ್ಷಗಳ ನಾಯಕ ಯೆಚೂರಿ ಹೇಳಿದ್ದಾರೆ.
ಮೋದಿ ಸರ್ಕಾರವು ಜನ ವಿರೋಧಿ ಹಾಗೂ ಪ್ರಗತಿಪರವಲ್ಲದ ಆರ್ಥಿಕ ನೀತಿಗಳ ಸಂಯೋಜನೆಯಾಗಿದೆ. ಅಚ್ಛೇ ದಿನ್ ಎಂಬ ಹೆಸರಿನ ಮೂಲಕ ದೇಶದಲ್ಲಿ ಕೋಮುವಾದ ಹುಟ್ಟಿಕೊಳ್ಳುತ್ತಿದೆ ಎಂದು ಯೆಚೂರಿ ಮೋದಿ ವಿರುದ್ಧ ಆಪಾದನೆ ಮಾಡಿದ್ದಾರೆ.