ಪಂಜಾಬ್ ದಾಳಿ ಉಗ್ರನ ಕೈಯಲ್ಲಿ ಮೇಡ್ ಇನ್ ಪಾಕಿಸ್ತಾನ್ ಕೈಗವಸು!

ಪಂಜಾಬ್ ನಲ್ಲಿ ನಡೆದ ಉಗ್ರರ ದಾಳಿ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂಬುದು ಮತ್ತಷ್ಟು ಸ್ಪಷ್ಟವಾಗುತ್ತಿದೆ.
ಪಂಜಾಬ್ ನಲ್ಲಿ ನಡೆದ ಸೇನಾ ಕಾರ್ಯಾಚರಣೆ
ಪಂಜಾಬ್ ನಲ್ಲಿ ನಡೆದ ಸೇನಾ ಕಾರ್ಯಾಚರಣೆ

ನವದೆಹಲಿ: ಪಂಜಾಬ್ ನಲ್ಲಿ ನಡೆದ ಉಗ್ರರ ದಾಳಿ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂಬುದು ಮತ್ತಷ್ಟು ಸ್ಪಷ್ಟವಾಗುತ್ತಿದೆ. ದಾಳಿ ನಡೆಸಿದ್ದ ಉಗ್ರರ ಪೈಕಿ ಓರ್ವ ಉಗ್ರ ಪಾಕಿಸ್ತಾನದಲ್ಲಿ ತಯಾರಾಗಿದ್ದ ಕೈಗವಸು ಧರಿಸಿದ್ದ ಎಂಬುದು ಮರಣೋತ್ತರ ಪರೀಕ್ಷೆ ವರದಿಯಿಂದ ತಿಳಿದುಬಂದಿದೆ.

ಸೇನೆಯಿಂದ ಹತ್ಯೆಯಾದ ಪಂಜಾಬ್ ದಾಳಿಯ ಮೂವರು ಉಗ್ರರ ಶವಗಳನ್ನು ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿತ್ತು. ದಾಳಿ ನಡೆಸಿದ್ದ ಪೈಕಿ ಓರ್ವ ಉಗ್ರ ತನ್ನ ಕೈಗೆ ಮೇಡ್ ಇನ್ ಪಾಕಿಸ್ತಾನ್ ಎಂಬ ಗುರುತಿದ್ದ ಕೈಗವಸು ಧರಿಸಿದ್ದ. ಈ ಹಿನ್ನೆಲೆಯಲ್ಲಿ ಪಂಜಾಬ್ ನಲ್ಲಿ ನಡೆದಿದ್ದ ಉಗ್ರರ ದಾಳಿ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂಬುದು ಮತ್ತಷ್ಟು ಸ್ಪಷ್ಟವಾಗಿದೆ.
ಭಯೋತ್ಪಾದಕರ ಹತ್ಯೆ ನಂತರ ವಶಪಡಿಸಿಕೊಳ್ಳಲಾಗಿದ್ದ ನೈಟ್ ವಿಷನ್ ಸಾಧನ ಯು.ಎಸ್ ಸರ್ಕಾರಕ್ಕೆ ಸೇರಿದ್ದಾಗಿದ್ದು ಇದು ಅಫ್ಘಾನಿಸ್ತಾನದೊಂದಿಗೆ ಉಗ್ರರು ನಂಟು ಹೊಂದಿದ್ದರು ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ವರದಿ ತಿಳಿಸಿದೆ. ದಾಳಿಯ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ  ಗುರ್ದಾಸ್ ಪುರದ ದಾಳಿಗೂ ಇಸ್ಲಾಮಾಬಾದ್ ಗೂ ಸಂಬಂಧವಿದೆ ಎಂಬುದಕ್ಕೆ ಮಹತ್ವದ ಸಾಕ್ಷ್ಯ ದೊರೆತಂತಾಗಿದೆ. ಪಂಜಾಬ್ ಉಗ್ರರ ದಾಳಿ ಬಗ್ಗೆ ರಾಜ್ಯ ಸಭೆಗೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ದಾಳಿಯ ಉಗ್ರರು ಪಾಕಿಸ್ತಾನದಿಂದ ಬಂದಿದ್ದರು ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com