ಯಾವ ಅಪರಾಧಿಗೂ ಗಲ್ಲು ಶಿಕ್ಷೆ ಬೇಡ: ತರೂರ್

ಭಯೋತ್ಪಾದಕರು ಸೇರಿದಂತೆ ಯಾವ ಅಪರಾಧಿಗೂ ಗಲ್ಲು ಶಿಕ್ಷೆ ನೀಡಬಾರದು ಎಂದು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅಭಿಪ್ರಾಯ...
ಶಶಿ ತರೂರ್
ಶಶಿ ತರೂರ್
Updated on: 

ತಿರುವನಂತಪುರಂ : ಭಯೋತ್ಪಾದಕರು ಸೇರಿದಂತೆ ಯಾವ ಅಪರಾಧಿಗೂ ಗಲ್ಲು ಶಿಕ್ಷೆ ನೀಡಬಾರದು ಎಂದು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.

ಗಲ್ಲು ಶಿಕ್ಷೆ ಜಾರಿಯನ್ನು ವಿರೋಧಿಸಿರುವ ತರೂರ್ ಭಯೋತ್ಪಾದಕರಿಗೂ ಮರಣದಂಡಣೆ ವಿಧಿಸಬಾರದು ಎಂದು ಹೇಳಿದ್ದಾರೆ.

ಭಯೋತ್ಪಾದಕರಿಗೆ ಜೀವಿತಾವಧಿವರೆಗೂ ಪೆರೋಲ್‌ ನೀಡದೆ ಜೈಲು ಶಿಕ್ಷೆ ವಿಧಿಸಲಿ. ಆದರೆ, ಗಲ್ಲು ಶಿಕ್ಷೆ ನೀಡಬಾರದು ಎಂದ ತರೂರ್ ಕೊಲೆ ಮಾಡಿದ ವ್ಯಕ್ತಿಯನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಿದರೆ ಕೊಲೆಗಾರ ಮತ್ತು ಸರ್ಕಾರದ ನಡುವೆ ಯಾವ ವ್ಯತ್ಯಾಸವಿದೆ ಎಂದು ಪ್ರಶ್ನಿಸಿದ್ದಾರೆ.

 ಸರ್ಕಾರ ಕೂಡ ಕೊಲೆಗಾರರಂತೆ ವರ್ತಿಸಬಾರದು ಎಂದು ಹೇಳಿದ ಅವರು ಗಲ್ಲು ಶಿಕ್ಷೆ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು  ಪ್ರತಿಪಾದಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com