ಲಲಿತ್ ಮೋದಿ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಜಾರಿ

ಹಣಕಾಸು ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿಗೆ ಜಾಮೀನು ರಹಿತ ಬಂಧನ ವಾರೆಂಟ್ ನ್ನು ಮುಂಬೈ ನ್ಯಾಯಾಲಯವು ಬುಧವಾರ ಜಾರಿ ಮಾಡಿದೆ...
ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ (ಸಂಗ್ರಹ ಚಿತ್ರ)
ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ (ಸಂಗ್ರಹ ಚಿತ್ರ)
Updated on: 

ಮುಂಬೈ: ಹಣಕಾಸು ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿಗೆ ಜಾಮೀನು ರಹಿತ ಬಂಧನ ವಾರೆಂಟ್ ನ್ನು ಮುಂಬೈ ನ್ಯಾಯಾಲಯವು ಬುಧವಾರ ಜಾರಿ ಮಾಡಿದೆ.

2008ರ ಐಪಿಎಲ್‌ ಆವೃತ್ತಿಯ ಟೀವಿ ಪ್ರಸಾರದ ಹಕ್ಕನ್ನು ನೀಡಲು ಮತ್ತು ಪ್ರಸಾರ ಸಮಯ ಒಪ್ಪಂದಕ್ಕಾಗಿ 425 ಕೋಟಿ ಹಣ ಅವ್ಯವಹಾರ ನಡೆಸಿದ್ದಾರೆ ಎಂಬ ಪ್ರಕರಣ ಸಂಬಂಧ 2010 ರಲ್ಲಿ ಚೆನ್ನೈನಲ್ಲಿ ಬಿಸಿಸಿಐ ಎಫ್ ಐಆರ್ ದಾಖಲಿಸಿದ್ದು, ಅಲ್ಲದೆ, ಹಣಕಾಸು ಅವ್ಯವಹಾರ ಪ್ರಕರಣ ಸಂಬಂಧ ಲಲಿತ್ ಮೋದಿಗೆ ಸಮನ್ಸ್ ಜಾರಿ ಮಾಡಿತ್ತು.

ಪ್ರಸ್ತುತ ಲಲಿತ್ ಮೋದಿ ಲಂಡನ್ ನಲ್ಲಿ ನೆಲೆಸಿದ್ದು, ಪ್ರಕರಣ ಸಂಬಂಧ ಹಲವು ಬಾರಿ ಸಮನ್ಸ್ ಜಾರಿ ಮಾಡಿದ್ದರು ವಿಚಾರಣೆ ಹಾಜರಾಗದೆ ತಮ್ಮ ಜೀವಕ್ಕೆ ಅಪಾಯವಿದ್ದು, ಭೂಗತ ಪಾತಕಿಗಳು ಬೆದರಿಕೆ ಹಾಕಿದ್ದಾರೆಂದು ಹೇಳಿದ್ದಾರೆ. ಈ ಕುರಿತಂತೆ ವಿಚಾರಣೆ ವೇಳೆ ಮೋದಿ ಪರ ವಕೀಲ ಮಾತನಾಡಿ, ಲಲಿತ್ ಮೋದಿ ಅವರಿಗೆ ಇದೀಗ ಜೀವ ಬೆದರಿಕೆ ಕರೆಗಳು ಬಂದಿದ್ದು, ಪ್ರಕರಣ ಸಂಬಂಧ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೊಳಪಡಲು ಸಿದ್ದರಿದ್ದಾರೆ ಎಂದು ಹೇಳಿದ್ದರು.

ಪ್ರಕರಣ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ಸಮನ್ಸ್ ಜಾರಿ ಮಾಡಿದ್ದರು ಲಲಿತ್ ಮೋದಿ ಅವರು ಹಾಜರಾಗದಿರುವುದನ್ನು ಕಂಡ ಜಾರಿ ನಿರ್ದೇಶನಾಲಯವು ಲಲಿತ್ ಮೋದಿ ಅವರಿಗೆ ಜಾಮೀನು ರಹಿತ ಬಂಧನವಾರೆಂಟ್ ಜಾರಿ ಮಾಡುವಂತೆ ಕೋರಿ (ಇಡಿ) ವಿಶೇಷ ನ್ಯಾಯಾಲಯದ ಮೊರೆ ಹೋಗಿತ್ತು. ಜಾರಿ ನಿರ್ದೇಶನಾಲಯ ಮನವಿ ಸ್ವೀಕರಿಸಿರುವ ವಿಶೇಷ ನ್ಯಾಯಾಲಯವು ಇದೀಗ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದ್ದು, ಇದೀಗ ಲಲಿತ್ ಮೋದಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com