ಆರೋಪ ಮಾಡುವುದನ್ನು ಬಿಟ್ಟು ಸಾಕ್ಷ್ಯಾಧಾರ ಒದಗಿಸಿ: ಭಾರತಕ್ಕೆ ಪಾಕಿಸ್ತಾನ

ಪಾಕಿಸ್ತಾನ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದೆ ಎಂದು ಹೇಳುತ್ತಿರುವ ಭಾರತ ಆರೋಪ ಮಾಡುವುದನ್ನು ಬಿಟ್ಟು ಮೊದಲು ಸಾಕ್ಷ್ಯಾಧಾರಗಳನ್ನು ಒದಗಿಸಲು ಎಂದು ಪಾಕಿಸ್ತಾನ ಗುರುವಾರ ಹೇಳಿದೆ...
ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಸೈಯದ್‌ ಕ್ವಾಜಿ ಖಲೀಲುಲ್ಲ (ಸಂಗ್ರಹ ಚಿತ್ರ)
ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಸೈಯದ್‌ ಕ್ವಾಜಿ ಖಲೀಲುಲ್ಲ (ಸಂಗ್ರಹ ಚಿತ್ರ)
Updated on: 

ಕರಾಚಿ: ಪಾಕಿಸ್ತಾನ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದೆ ಎಂದು ಹೇಳುತ್ತಿರುವ ಭಾರತ ಆರೋಪ ಮಾಡುವುದನ್ನು ಬಿಟ್ಟು ಮೊದಲು ಸಾಕ್ಷ್ಯಾಧಾರಗಳನ್ನು ಒದಗಿಸಲು ಎಂದು ಪಾಕಿಸ್ತಾನ ಗುರುವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಸೈಯದ್‌ ಕ್ವಾಜಿ ಖಲೀಲುಲ್ಲ ಅವರು, ಭಾರತ ಸಾಕ್ಷ್ಯಾಧಾರಗಳನ್ನು ಒದಗಿಸುವುದನ್ನು ಬಿಟ್ಟು ಪಾಕಿಸ್ತಾನ ವಿರುದ್ಧ ನಿರಂತರವಾಗಿ ಆರೋಪಗಳನ್ನು ವ್ಯಕ್ತಪಡಿಸುತ್ತಿದೆ. ಈ ಆರೋಪಗಳು ಆಧಾರ ರಹಿತವಾಗಿದ್ದು ಪಾಕಿಸ್ತಾನ ಇಂತಹ ಆರೋಪಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಉಧಂಪುರದ ಹೆದ್ದಾರಿಯಲ್ಲಿ ಇಬ್ಬರು ಉಗ್ರರು ನಡೆಸಿದ ಗುಂಡಿನ ಕಾಳಗದಲ್ಲಿ 2 ಯೋಧರು ಸಾವನ್ನಪ್ಪಿದ್ದರಲ್ಲದೇ, 8 ಮಂದಿ ಗಾಯಗೊಂಡಿದ್ದರು. ಉಗ್ರರ ಗುಂಡಿನ ದಾಳಿಗೆ ಪ್ರತ್ಯುತ್ತರ ನೀಡಿದ್ದ ಭಾರತೀಯ ಯೋಧರು ಓರ್ವ ಉಗ್ರನನ್ನು ಹೊಡೆದುರುಳಿಸಿದ್ದರಲ್ಲದೇ, ಮತ್ತೋರ್ವ ಉಗ್ರನನ್ನು ಸಜೀವವಾಗಿ ಬಂಧನಕ್ಕೊಳಪಡಿಸಿದ್ದರು. ಬಂಧಿತ ಉಗ್ರ ಪಾಕಿಸ್ತಾನ ಮೂಲದ ಉಸ್ಮನ್ ಖಾನ್ ಹೇಳಲಾಗುತಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com