ಢಾಕಾ: ಮತ್ತೊಬ್ಬ ಬ್ಲಾಗರ್ ಹತ್ಯೆ

ಇಲ್ಲಿನ ಸೆಕ್ಯುಲರ್ ಬ್ಲಾಗರ್ ಒಬ್ಬರನ್ನು ಅಲ್‍ಖೈದಾ ಉಗ್ರರ ಗುಂಪು ಚಾಕುವಿನಿಂದ ನಇರಿದು ಹತ್ಯೆ ಮಾಡಿದ್ದು, ಇದರೊಂದಿಗೆ ಈ ವರ್ಷದ ಆರಂಭದಿಂದ...
ನಿಲೋಯ್ ನೀಲ್
ನಿಲೋಯ್ ನೀಲ್
Updated on: 

ಢಾಕಾ: ಇಲ್ಲಿನ ಸೆಕ್ಯುಲರ್ ಬ್ಲಾಗರ್ ಒಬ್ಬರನ್ನು ಅಲ್‍ಖೈದಾ ಉಗ್ರರ ಗುಂಪು ಚಾಕುವಿನಿಂದ ನಇರಿದು ಹತ್ಯೆ ಮಾಡಿದ್ದು, ಇದರೊಂದಿಗೆ ಈ ವರ್ಷದ ಆರಂಭದಿಂದ ಈವರೆಗೆ ಇದೇ ರೀತಿಯದಾಳಿಯಿಂದ ಮೃತಪಟ್ಟ ಸೆಕ್ಯುಲರ್ ಬ್ಲಾಗರ್‍ಗಳ ಸಂಖ್ಯೆ ನಾಲ್ಕಕ್ಕೇರಿದೆ. ಢಾಕಾದ ಗೊರಾನ್ ಪ್ರದೇಶದ ನಿಲೋಯ್ ನೀಲ್ ಹತ್ಯೆಯಾದ ಬ್ಲಾಗರ್. ಶುಕ್ರವಾರ ಬೆಳಿಗ್ಗೆ ಅವರ
ಅಪಾರ್ಟ್ ಮೆಂಟ್‍ನ ಐದನೇ ಮಹಡಿಯಲ್ಲಿ ರುವ ಮನೆಗೆ ಮಾರಕಾಸ್ತ್ರಗಳೊಂದಿಗೆ ಏಕಾಏಕಿ ನುಗಿದ ಗುಂಪು, ಜೊತೆಗಿದ್ದ ಅವರ ಸ್ನೇಹಿತನನ್ನು ದೂರ ತಳ್ಳಿ, ನೀಲ್‍ಗೆ
ಚಾಕುವಿನಿಂದ ಇರಿದು ಹತ್ಯೆ ಮಾಡಿದೆ ಎಂದು ತನಗೆ ಪ್ರತ್ಯಕ್ಷ ದರ್ಶಿಯೊರು ತಿಳಿಸಿದ್ದಾರೆ ಎಂದು ಬಾಂಗ್ಲಾದೇಶ್ ಬ್ಲಾಗರ್ ಅಂಡ್ ಆಕ್ಟಿವಿಸ್ಟ್ ನೆಟ್‍ವರ್ಕ್ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com